Tuesday, August 25, 2020

ಸ್ನೇಹ ಪ್ರೀತಿಯನ್ನು ಅದನ್ನು ನಿಭಾಯಿಸಲಾಗದವರು ಮಾಡಲೇ ಬಾರದು.. ಗಳಿಸಿಕೊಳುವುದೂ ಸುಲಭವಲ್ಲ ಹಾಗೇ ಉಳಿಸಿಕೊಳ್ಳುವುದೂ.. ಯಾವುದನ್ನು ನಾವು ಹೃದಯಪೂರ್ವಕವಾಗಿ ಮಾಡಲಾಗುವುದಿಲ್ಲವೋ ಅದನ್ನು ಉಳಿಸಿಕೊಳ್ಳುವುದು ಕಷ್ಟ.. ಒಂದೇ ಕಾಲಕ್ಕೆ ಸಾವಿರ ಸ್ನೇಹ ಮಾಡಬಹುದು. ಪ್ರೀತಿ ಕೂಡ ಮಾಡಬಹುದು. ಅದು ನಮ್ಮಿಚ್ಛೆ.. ಆದ್ರೇ ನಿಭಾಯಿಸಬೇಕಾದ್ದು ನಮ್ಮ ಕರ್ತವ್ಯ. ಇಚ್ಛೆಗೂ ಕರ್ತವ್ಯಕ್ಕೂ ವ್ಯತ್ಯಾಸವಿದೆ. ಎಲ್ಲರಿಗೂ ಪ್ರೀತಿ ಸ್ನೇಹ ನೀಡುವ ಮನಸ್ಸಿದ್ದರೇ ಅಲ್ಲಿ ಸ್ವಾರ್ಥ ಸುಳಿಯಬಾರದು. ಸ್ವಾರ್ಥವಿಲ್ಲದ ಮುಚ್ಚು ಮರೆಯಿಲ್ಲದ ಮನಸಿಗಷ್ಟೇ ಸ್ನೇಹ ಪ್ರೀತಿ ದಕ್ಕುವುದು. ಸ್ನೇಹಕ್ಕೆ ಅರ್ಥ ಕೃಷ್ಣ ಮತ್ತು ದ್ರೌಪದಿ.. ಕೃಷ್ಣ ಮತ್ತು ಸುಧಾಮ.‌ಕರ್ಣ ಮತ್ತು ದುರ್ಯೋಧನ . ಗಳಿಸುಕೊಳ್ಳುವುದರಲ್ಲಿರೋ ಗುಣ ಉಳಿಸಿಕೊಳ್ಳೊದರಲ್ಲಿರಬೇಕು.. ಕಾರಣವಿಲ್ಲದೇ ಸ್ನೇಹವನ್ನು ಪ್ರೀತಿಯನ್ನು ದೂರ ಮಾಡುವ ವ್ಯಕ್ತಿತ್ವ  ಇರುವ ಮನ್ಸುಗಳಿಗೆಂದೂ ಸರಿಯಾದ ಸ್ನೇಹ ಅಥವಾ ಪ್ರೀತಿ ದೊರಕದು.. ಎಷ್ಟು ಜನವಿದ್ದರೂ ಅವರುಗಳು ಒಂಟಿತನವನ್ನೇ ಅನುಭವಿಸುತ್ತಾರೆ. ನಿಷ್ಠೆ ಇಲ್ಲದಲ್ಲಿ ಪ್ರೀತಿ ಉಳಿಯುವುದಿಲ್ಲ. ಸ್ವಾರ್ಥವಿದ್ದಲ್ಲಿ ಸ್ನೇಹ ಬಾಳುವುದಿಲ್ಲ..... ಸುನೀ