ಒಮ್ಮೆ ಕವಿತೆಗೂ ಬೇಸರವಾಗಿಬಿಟ್ಟಿತು
ಎಲ್ಲದಕೂ ತಾನೆ ಬೇಕೇ
ಅದೆಷ್ಟು ಭಾವಗಳ ಕಕ್ಕುವುದು
ಬಿಕ್ಕುವುದು????
ನನಗೂ ಬೇಡವೇ ವಿಶ್ರಾಂತಿ?
ಓ ಭಾವಗಳೆ ಸುಳಿಯದಿರಿ ನನ್ನತ್ತ
ಬೆರಳುಗಳೇ ಕೊರೆಯದಿರಿ ನನ್ನ
ಅಕ್ಷರಗಳೆ ಮೂಡದಿರಿ
ಬಿಡಿ ನನ್ನ ಪಾಡಿಗೆನ್ನ
ಒಮ್ಮೆ ಮೌನವಾಗಬಿಡಿ
ಮತ್ತೆ ಹೊಸದಾಗಿ ಚಿಗುರಲು
ಸಮಯವ ಕೊಡಿ..
ಹೀಗೆಂದು ಬಿಕ್ಕಿದ ಕವಿತೆಯನ್ನೇ
ಕವಿ ತನ್ನ ಸ್ವಾರ್ಥಕ್ಕೆ ಬಳಸಿಕೊಂಡುಬಿಟ್ಟ
ಅದನೇ ಚಂದದ ಕವನವಾಗಿಸಿಬಿಟ್ಟ..... ಸುನೀ
No comments:
Post a Comment