ಯಾಕೋ ನನ್ನ ಹೃದಯವೀಣೆ
ತನ್ನಂತೇ ತಾನೇ
ನಿನ್ನ ಹೆಸರ ನುಡಿಸಿದೆ ....
ಮನದ ಭಾವ ಭಾರವಾಗೆ
ಕಂಗಳೇಕೋ ಹನಿದಿದೇ
ಪಿಸು ನುಡಿವ ತುಟಿಗಳೇಕೋ
ಒಂದನೊಂದು ಅಂಟಿವೇ...
ತಂಗಾಳಿಯಲೆಯು ಬಿಸಿಯೆನಿಸೇ
ಒಡಲು ತಳಮಳಿಸಿದೇ
ಮನಸೇಕೋ ಚಡಪಡಿಸಿ
ನಿನ್ನ ಪ್ರೀತಿ ಬೇಡಿದೆ..
ನಿನ್ನ ಕೊಳಲ ನಾದವೇಕೆ
ಇಂದು ಕೇಳದಾಗಿದೆ
ರಾಧೆಯಳಲೂ ಕೇಳದೇನು
ಮಾಧವ ಮರೆತಂತಿದೆ.... ಸುನೀ
No comments:
Post a Comment