ಒಂದೊಮ್ಮೆ ನಿನ್ನ ಹೆಸರೇ
ನನ್ನ ಪುಳಕಿಸುತಿತ್ತು
ಅರಳಿಸುತಿತ್ತು ನನ್ನೆದೆಯ
ಹರುಷದ ಹೊನಲಲಿ ..
ಇಂದೇಕೇ ನೀ ಮತ್ತೆ ಬಂದರೂ
ಈ ಹೃದಯ ಅರಳುತಿಲ್ಲ
ಕೆರಳುತಿಲ್ಲ ನನ್ನೊಡಲಿಗೆ ಸಿಹಿ
ನೋವ ನೀಡುತಿಲ್ಲ? ...
ಬರಿದಾಗಿರಬೇಕು
ನನ್ನೊಳಗಿನ ಭಾವ
ತಡೆಯಲಾಗದೇ
ನೀನಿತ್ತ ನೋವ ..
ಬೇಡವೆನಿಸುತ್ತಿರುವಾಗ
ಈ. ಜೀವ...
ಪ್ರೀತಿಗೆಲ್ಲಿ ನೀಡುತ್ತದೆ ಮನಸು
ತನ್ನೊಳಗೆ ನಿನ್ನಿರವ..???
ನಾನಾಗಿರುವೆನೊಂದು
ಜೀವಚ್ಛವ ..
ಸಾಧ್ಯವಾದರೆ ಮತ್ತೆ
ನನ್ನೊಳಗೆ ನೀನೆ
ತುಂಬಬೇಕು ಒಲವಾ.. .... ಸುನೀ
No comments:
Post a Comment