ಮೌನವಿಡಿಯಾಗಿ ಕೊಲ್ಲುವ ಮುನ್ನ
ಉಳಿಸಿಕೋ ನಿನ್ನ ಮಾತಿಂದ ನನ್ನ...
ನಿನ್ನ ಬಾಹುಗಳಿಗೆ ಶರಣಾಗುವೆ
ಕುಸಿದುಬೀಳುವ ಮುನ್ನ ಅಪ್ಪಿಕೋ ಎನ್ನ...
ನಿನ್ನ ಪ್ರೀತಿಗೆನ್ನ ಕಂಗಳು ತುಂಬಿದರೆ
ಕಂಬನಿ ಜಾರುವ ಮುನ್ನ ಒಮ್ಮೆ
ತಡೆದು ಬಿಡು ನಿನ್ನ ತುಟಿಗಳಲಿ ಆದನ....
ಹೆಚ್ಚೇನು ಹೇಳಲಿ ?
ನೀನೆ ನಾನಾಗುವ ತವಕ
ಒಪ್ಪಿಸಿಕೊಂಡುಬಿಡು ನನ್ನ....ಸುನೀ
No comments:
Post a Comment