ಒಂದೊಮ್ಮೆ ಬಂಧಗಳ
ಜರೂರತ್ತಿಗೆಒದ್ದಾಡುತಿದ್ದೆ
ಹಿಡಿ ಪ್ರೀತಿಯ ಕೊಳಲು
ಕೊಡಲು ಕಾಯುತಿದ್ದೆ
ಈಗನಿಸುತ್ತಿದೆ ಭ್ರಮೆಯ
ಹರಿವಿನೊಳಗೆ ತೇಲುತಿದ್ದೆ ನಾ
ದೈನೇಸಿತನದ ಪರಮಾವಧಿಯಾಗಿದ್ದೆನಾ?
ಪ್ರೀತಿ ಯಾರ ಸೊತ್ತೂ ಅಲ್ಲ ..ಬಂಧಗಳೂ.
ನೀರೀಕ್ಷೆಗಳೇಂದೂ ಸುಳ್ಳಾಗುವುದಿಲ್ಲಾ
ಬೇಕಾಗಿರುವುದರ ಹಿಂದೆ ಓಡುವುದ
ಬಿಡುವುದ ತನಕ
ಮುಖ ತಿರುಗಿಸಿ ನಿಂತಿದ್ದೇನೀಗ
ಯಾವ ಪ್ರೀತಿಯ ಬೇಡಿಕೆಗಳೂ ಇಲ್ಲ
ಯಾವ ಬಂಧಗಳ ಜರೂರತ್ತೂ ಕಾಣುತ್ತಿಲ್ಲ
ಹೃದಯವೀಗ ಖಾಲೀ ಕೊಡ
ಅರಿವಿನ ಹಿಂದೆ ಬಿದ್ದಿದೆ ಮನಸು
ಭಾವನೆಗಳು ಬರಿದಾಗಿವೆ
ಅದರೂ ಬದುಕಬೇಕಿದೆ
ಬದುಕು ನೀಡಿದವರಿಗಾಗಿ
ಮಿಡಿಯಬೇಕಿದೆ ಹೃದಯ
ಸ್ವಾರ್ಥವಿಲ್ಲದ ಪ್ರೀತಿಯಾಗಿ..... ಸುನೀ
No comments:
Post a Comment