Sunday, August 11, 2019

ವಯಸು ಮ
09/08/2019
ವಯಸು ಮಾಗುವಂತೆ
ಮನಸು ಮಾಗುವುದಿಲ್ಲ
ಯಾಕೋ...
ಹಳೆಯದೇ ಭ್ರಮೆಯಲಿದ್ದೇನೆ
ಅದೇ ಸುಂದರ ಮೊಗ
ಹೊಳಪು ಕಂಗಳು
ಜೇನು ಸುರಿವಂತೆ ನಸುಗೆಂಪಿನ
ಅದೇ ಅರೆಬಿರಿದ ತುಟಿಗಳು
ಗುಲಾಬಿ ಕೆನ್ನೆಗಳು
ಕೆನ್ನೆಯ ಚುಂಬಿಸುವ
ಕರಿಮೋಡದಂತಾ ಮುಂಗುರುಳು
ಸೊಗಸು ತುಂಬಿದ ಮೈಮಾಟ
ಅದೇ ಭ್ರಮೆಯಲ್ಲಿದ್ದೇನೆ..
ಕನ್ನಡಿಯೇ ಶತ್ರುವಾಗಿದೆಯೇ
 ನನಗೇ..??
ತೋರುತ್ತದೆ ಇನ್ಯಾರನ್ನೋ????
ತುಸು ಕಪ್ಪಾದಂತೆ ಮೊಗ
ಕಂಗಳ ಸುತ್ತ  ಕರಿನೆರಿಗೆ
ಮಾಯವಾಗಿದೆ ಹೊಳಪು
ಒಣಗಿದ ತುಟಿಗಳು ಒಳಹೊಕ್ಕ ಕೆನ್ನೆ
ನೆರೆತು ಉದುರುತ್ತಿರುವ ಕೂದಲು
ಜೋತ ತೊಗಲು ..‌ಅಯ್ಯೋ....
ಯಾರಿದು?? ಸುಳ್ಳೇ ಬಿಂಬಿಸಬೇಡ
ಓ ದರ್ಪಣವೇ..
ಸ್ವಲ್ಪವಾದರೂ ಕರುಣೆ ತೋರು
ನಗುವ ಬೀರಲಾದರೂ ಬಿಡು
ಇಲ್ಲ .‌.ನೀ ನಿಷ್ಕರುಣಿ
ದ್ವೇಷಿಸುತ್ತೇನೆ ನಿನ್ನ
ನೋಡುವುದಿಲ್ಲ ಇನ್ನೆಂದೂ
ತಿರುಗಿಬಿಡು ಅತ್ತ
ಬದುಕಬೇಕಿದೆ ಇನ್ನೂ
ನಿರಾಶೆಗಗೆಳೆಸೆಬೇಡ
ಭ್ರಮೆಯಲ್ಲಿದ್ದೇಬೆ ನಾನು
ಅದ ಬಿಡಿಸುವ ಭ್ರಮೆ ನಿನಗೇಕೋ..
ನಗಿಸಿಬಿಡೊಮ್ಮೆ ನನ್ನ
ಸಾವಿನಾ ಕದ ತಟ್ಟುವಾ ಮುನ್ನ......... ಸುನೀ

Saturday, July 13, 2019

ಹಾಡು

ಮುರಳಿ ಮೋಹನ ಗಾನ
ಕುಣಿದಿದೆ ನೋಡು ನನ್ನ ಮನ ।। ಮುರಳಿ ।।

ನಿನ್ನಧರದ ಸ್ಪರ್ಶಕೆ ಬೀಗುವ ಕೊಳಲು
ಹರಿವುದು ನೋಡು ಗಾನದ ಹೊನಲು
ಕೊಳಲಿನ ಭಾಗ್ಯಕೆ ಕರುಬುವುದು ಮನ
ಹೇಗೆ ಹೇಳಲಯ್ಯ ಮನದ ಆಸೆಯ ನಾ.... ।।ಮುರಳಿ।।

ಕೊಳಲ ಗಾನದಲಿ ಮನದಮಾತಿದೆ
ನಿನ್ನೊಲವ ಕಥೆಯೆಲ್ಲಾ ಕೊಳಲೇ ಹೇಳಿದೆ
ಒಲವ ಸುಧೆಯಲಿ ಮೀಯೋಣ ಬಾ
ಪ್ರಕೃತಿ ಪುರುಷ ನಾವಾಗೋಣ ಬಾರಾ...।। ಮುರಳಿ ।।
                                            ..................suni

Friday, May 17, 2019

ನೀನೇನೋ ಕಂಸಮರ್ಧನ ನೆಪದಲ್ಲಿ
ಎದ್ದು ನಡೆದುಬಿಟ್ಟೆ
ನನಗ್ಯಾವ ನೆಪವಿಹುದು ಹೇಳು?
ಹೋತ್ಟೆರುವ ಮೊದಲೇ ನಿನ್ನೆದುರು
ನನ್ನ ಗಲ್ಲಕ್ಕೆ ಕೈಯೊತ್ತಿ ಕೂತು
ನಿನ್ನ  ಮುರಳಿಯ ನಾದದಲಿ
ಲೀನವಾಗುವುದು ಅಭ್ಯಾಸವಾಗಿ ಬಿಟ್ಟಿತ್ತಲ್ಲಾ??
ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನನ್ನ ಬಿಂಬ
ಕಾಣುವುದು ನಿತ್ಯನಿರಂತರವೆಂದಿದ್ದೆ
ಯಮುನೆಯಲಿ  ಮೀವಾಗ ನಿನ್ನ
ಕಳ್ಳ ನೋಟಕೆ ನಾಚಿ ಮೊಗ್ಗಾಗುವ
ನನ್ನ ಗಲ್ಲವ ಹಿಡಿದು ನೀ ಚಿವುಟಿದ
ಗಾಯದ ಕಲೆ ನಿನ್ನ ನೆನಪಿಸುವುದಾ
ತಡೆಯಲೀ ಹೇಗೇ?
ನಾ ನಿಂತಲ್ಲಿಯೇ ಧ್ಯಾನಸ್ಥಳಾಗುತ್ತೇನಂತೆ
ಮೌನದಲೇ ಮುಳುಗುತ್ತಿದ್ದೇನಂತೆ
ಅಗಾಗ ಕಣ್ಣಲ್ಲಿ ಹನಿ ಹೊಳೆಯುವುದಂತೆ
ಅಂತೆ ಕಂತೆಗಳ  ನನ್ನೆಡೆಗಿನ ದೂರಿದು ನೋಡು
ಅದಕೆಲ್ಲಾ ನೀನೆ ಕಾರಣವೆಂಬ ಸತ್ಯ
ನನ್ನೊಳಗೇ ದಹಿಸಲಿ ಬಿಡು
ಚಿರವಿರಹಿ ನಾನೆಂಬ ಕಟುಸತ್ಯ
ಜಗಕೆ ತಿಳಿಯದು
ಅಮರ ಪ್ರೇಮವಂತೆ ಈ ರಾಧಾಕೃಷ್ಣ ರದು.....


Thursday, May 2, 2019

ನೆಲಕೆ ಬಿದ್ದ ಹೂವು

(ಹಳೆಯದು)

ನೆಲಕೆ ಬಿದ್ದ ಹೂವು ನಾನು
ಅಂದವಿರದು ನನ್ನಲಿ
ಸುಗಂಧವಿರದು .ನನ್ನಲಿ

ಮುಡಿಗೆ ನಾನು ಸೇರಲಿಲ್ಲ
ದೇವರಿಗೂ ಸಲ್ಲಲಿಲ್ಲ
ತೊಟ್ಟು. ಕಳಚಿ ಬಿದ್ದೆನಲ್ಲ
ಮಣ್ಣ ಪಾಲಾದೆನಲ್ಲಾ...

ಗಾಳಿಯಲೆಗೆ ತೇಲಿ ನಾನು
ಧೂಳ ತೆರೆಗೆ ಸೇರಿ ಹಾರೆ
ಮತ್ತೆ ಬೀಳೆ ನೆಲದ ಮೇಲೆ
ಮನುಜ ಪಾದದಡಿಯ ಪಾಲೇ

ಪ್ರಕ್ರತಿ ನಿಯಮವಿದೆ ಕೇಳೆ
ನನ್ನ ಕಾಲ ಮುಗಿದಮೇಲೆ
ಹೊಸ ಹೂವಿನ ಹುಟ್ಟು ತಾನೆ
ತಿರುಗುವುದು ಕಾಲ ಚಕ್ರ
ಮರಳಿ ಎಲ್ಲ ಮಣ್ಣಿಗೇನೆ.. ಸುನೀ

ಬೆತ್ತಲ ಬಯಲು

ಬಟ್ಟ ಬಯಲೊಳಗೆ ನಿಂತಿದ್ದೇನೆ
ಸುತ್ತಲೂ ಬೆತ್ತಲ ಬೆಳಕು
ರವರವನೆ ಬೀಸುವ ಗಾಳಿ
ಮರಗಟ್ಟಿದೆ ಮನಸು ಮೈ
ಯಾರ ನಿರೀಕ್ಷೆಯ ಹಂಬಲಕೋ
ಬಾಳ ಪರೀಕ್ಷೆಯ ಘಟ್ಟಕೋ
ಭಾವನೆಗಳ ಚಟ್ಟಕೋ
ನೆನಪುಗಳ ಅಂತ್ಯಕೋ
ನಿಂತುಬಿಟ್ಟಿದೆ ಕಾಲ
ಅಲುಗಾಡದೇ
ನಿಂತಿದ್ದೇನೆ ಬಟ್ಟಬಯಲೊಳಗೆ
ಬಯಲಾಗಿಸಬಯಸಿ ಎಲ್ಲ
...ಸುನೀ

ಕರುಣೆ

ಕತ್ತಲಿಗೂ ಕರುಣೆ ಇದೆ
ನಿನ್ನ ಕಣ್ಣ ಭಾವಗಳ
ತೋರಗೊಡಿಸುವುದಿಲ್ಲ...
ಕಂಬನಿಯ ಕಾಣಗೊಡಿಸುವುದಿಲ್ಲ
ನಿನ್ನ ಬೆತ್ತಲ ಬಯಲುಗೆಡಿಸುವುದಿಲ್ಲ..
ಒಟ್ಟಿನಲಿ ನಿನ್ನ ನೋವೆಲ್ಲ ಮುಚ್ಚಿಟ್ಟು
ನಿನ್ನಿರವ ಬಚ್ಚಿಡುವುದಲ್ಲಾ
ತಾಯ ಗರ್ಭದಲ್ಲಿರುವ
ಶಿಶುವಿನಂತೆ...
ಕತ್ತಲಿಗೂ ಕರುಣೆ ಇದೆ
ತಾಯ ಹೃದಯದಂತೆ...ಸುನೀ

ಭರತನಾಟ್ಯ

ಭಾವ ರಾಗಗಳ
ತಾಳ ಲಯ ಗತಿ
ಹೆಜ್ಜೆ ಗೆಜ್ಜೆಗಳಧಿಪತಿ
ನವರಸಗಳಭಿವ್ಯಕ್ತಿ
ಇದುವೆ ನರ್ತನ ಶಕ್ತಿ.. ....ಸುನೀ

Monday, April 22, 2019

ಸಹನೆ

ಕಡಲು ಕೇಳಿತು ನದಿಯ " ಉಪ್ಪಾಗಿರುವ
ನನ್ನ ಅಪ್ಪಪ್ಪಿ ಬೆರೆವೆಯಲ್ಲೇ 
ಅಸಹನೀಯವೆನಿಸದೇನೆ ನಲ್ಲೇ?"
ನದಿಯುಸುರಿದಳು" ನಿನ್ನ ಸಿಹಿಯಾಗಿಸಿ
ಸಹನೀಯವಾಗಿಸುವ ಕಾಯಕ
ನನದಿದೆ ನಲ್ಲ..  
ನಿನ್ನ ಸೇರುವುದ  ನಾ ಎಂದಿಗೂ
ಬಿಡುವುದಿಲ್ಲ......  ಸುನೀ

ಹೊರೆ

ನೀ ಬಿಟ್ಟು ಹೋದ
ನೆನಪುಗಳಿಗೆ
ನಾ ಅಭಾರಿ..
ಹೊರಲಾಗುತ್ತಿಲ್ಲ
ಭಾರ ಮನಸ
ಸಾಗುವುದು ಕಷ್ಟ
ದೂರದ ದಾರಿ....‌
ಆದರೂ ಇನ್ನೆಂದೂ
ಬೇಡುವುದಿಲ್ಲ ನಿನ್ನ
ಹೆಗಲ ಬಾರಿ ಬಾರಿ....ಸುನೀ

ಕೊಳಲು...

ಬರಿಯ ಬಿದಿರು
ಆಗೇ ಕೊಳಲು
ಕತ್ತಿ ತಾಗಬೇಕಿದೆ
ನಾದವದನು ಆವರಿಸಲು
ನಿನ್ನ  ಸ್ಪರ್ಷ ಕೇಳಿದೆ
ನಿನ್ನ ತುಟಿಯು ಸೋಕೆ
ಕೃಷ್ಣ  ಗಾನವದು ಹೊಮ್ಮಿದೆ
ನಿನ್ನ  ಒಲವ ಪಲುಕು ನೋಡು
ಕೊಳಲ ದನಿಯಲಡಗಿದೆ
ಆ ದನಿಯ ಅಲೆಯು ನನ್ನ
ಅರಸಿ ನಿನ್ನ ಬಳಿಗೆ ಕರೆದಿದೆ
ಬಿದಿರ ಕೊಳಲು ನಿನ್ನ
ತಾಕಿ  ಧನ್ಯತೆಯನು
ಮೆರೆದಿದೆ  .... ಸುನೀ

ಕೊಳಲು

(ಎಳೆ‌.. ರಾಜೇಶ್ ಗೋಟೂರ್)

~ಉಸಿರಾದ ಒಲವು~

ಕಾದಿದೆ ಅಧರ ಬಿದಿರಿನ  ಕೊಳಲೇ
ಸೋಕುವುದೆಂತು ಹೇಳಬಾರದೇ...
ಒಲವಿನ ಸರಿಗಮ ನುಡಿಸುವುದೆಂತು
ತಾಕದೆ ನಿನ್ನ ಮನವಾಂತು..
ಬೇಕಿದೆ ಉಸಿರು  ನೆನಪಿನ ಕೋಡಿ
ಹರಿಸಲು ನಿನ್ನ ಸಾಂಗತ್ಯ.
ನನ್ನಯ   ವಿರಹದ ಬೆಂಕಿಯ
ತಣಿಸಲು ನೀಡೆಯ ನಿನ್ನಯ ಸಾಮಿಪ್ಯ.....sunI

ಹೃದಯ ವೀಣೆ

ಯಾಕೋ ನನ್ನ ಹೃದಯವೀಣೆ
ತನ್ನಂತೇ ತಾನೇ
ನಿನ್ನ ಹೆಸರ ನುಡಿಸಿದೆ ....

ಮನದ ಭಾವ ಭಾರವಾಗೆ
ಕಂಗಳೇಕೋ ಹನಿದಿದೇ
ಪಿಸು  ನುಡಿವ ತುಟಿಗಳೇಕೋ
ಒಂದನೊಂದು ಅಂಟಿವೇ...

ತಂಗಾಳಿಯಲೆಯು ಬಿಸಿಯೆನಿಸೇ
ಒಡಲು ತಳಮಳಿಸಿದೇ
ಮನಸೇಕೋ ಚಡಪಡಿಸಿ
ನಿನ್ನ ಪ್ರೀತಿ ಬೇಡಿದೆ..

ನಿನ್ನ ಕೊಳಲ ನಾದವೇಕೆ
ಇಂದು ಕೇಳದಾಗಿದೆ
ರಾಧೆಯಳಲೂ ಕೇಳದೇನು
ಮಾಧವ  ಮರೆತಂತಿದೆ.... ಸುನೀ

ನಿರಂತರ

ಕಡಲಳೆಗಳೆಂದೂ ಸೋಲುವುದಿಲ್ಲ
ದಡವ ಮುಟ್ಟುವಾಟದಲಿ.
ಇಟ್ಟುಕೊಳುವುದಿಲ್ಲ ಏನನೂ
ಬೇಡದ ಕಲ್ಮಷಗಳ  ಕಡಲಿನಾಳದಲಿ..
ಇರಲೀ ನಮ್ಮ ಮನಸೂ ಹಾಗೆ
ಬೇಡದ ವಿಷಯಗಳ  ಹೊರ ಹಾಕುವಲ್ಲಿ
ಉಕ್ಕಲಿ  ನಿರಂತರ ಉತ್ಸಾಹದಲೆಗಳು
ನಿಷ್ಕಲ್ಮಷವಾಗಲಿ  ಮನದಾಳ
ನಿರಂತರ ಬದುಕ ಪ್ರೀತಿಸುವ
ಛಲವಿರಲಿ  ಗೆಲುವ ನಗೆಯಿರಲಿ...... ಸುನೀ

ಪಾತ್ರ

ಮನ ಬಂದಂತೆ ಬದುಕಿಬಿಡಬೇಕೆನಿಸಿದರೂ
ಬದುಕಬೇಕೊಂದು ಪರಿಧಿಯೊಳಗೆ....
ಬದುಕು ಇರುವುದು ನಮಗಾಗಿಯಾದರೂ
ಬದುಕಬೇಕಾಗಿದೆ ಬೇರೆಯವರ ಆಸೆಗೆ..ತ್ರಪ್ತಿಗೆ..
ಉಳಿಸಿಕೊಳ್ಳಬೇಕೆಂದರೆ ಅಸ್ತಿತ್ವ
ಅಳಿಸಲೇಬೇಕು ನಮ್ಮ ಆದರ್ಶ..ತತ್ವ
ಒಂದೊಮ್ಮೆ ಬದುಕಿದರೂ
ಬದುಕಿಬಿಡಬಹುದು  ಮನಬಂದಂತೆ
ನಾಟಕದ ಪಾತ್ರದಂತೆ!!!!
,......suni

ಬರಡು

ಒಂದೊಮ್ಮೆ ನಿನ್ನ ಹೆಸರೇ 
ನನ್ನ ಪುಳಕಿಸುತಿತ್ತು
ಅರಳಿಸುತಿತ್ತು ನನ್ನೆದೆಯ
ಹರುಷದ ಹೊನಲಲಿ ..
ಇಂದೇಕೇ ನೀ ಮತ್ತೆ ಬಂದರೂ
ಈ‌ ಹೃದಯ ಅರಳುತಿಲ್ಲ
ಕೆರಳುತಿಲ್ಲ ನನ್ನೊಡಲಿಗೆ ಸಿಹಿ‌
ನೋವ ನೀಡುತಿಲ್ಲ?  ...
ಬರಿದಾಗಿರಬೇಕು
ನನ್ನೊಳಗಿನ ಭಾವ
ತಡೆಯಲಾಗದೇ
ನೀನಿತ್ತ ನೋವ  ..
ಬೇಡವೆನಿಸುತ್ತಿರುವಾಗ
ಈ. ಜೀವ...
ಪ್ರೀತಿಗೆಲ್ಲಿ ನೀಡುತ್ತದೆ ಮನಸು
ತನ್ನೊಳಗೆ ನಿನ್ನಿರವ..??? 
ನಾನಾಗಿರುವೆನೊಂದು
ಜೀವಚ್ಛವ   ..
ಸಾಧ್ಯವಾದರೆ  ಮತ್ತೆ
ನನ್ನೊಳಗೆ ನೀನೆ
ತುಂಬಬೇಕು ಒಲವಾ..  .... ಸುನೀ

ಸಾಂತ್ವನ

ನನ್ನೊಳಗಿನ ನೋವಿಗೆ
ಜವಾಬ್ಧಾರಿ ನಾನೇ..
ಸಾಂತ್ವಾನವೂ ಆಗಿರಬೇಕು
ನನದೇ...
ಇನ್ನೊಬ್ಬರ ಹೆಗಲಿಗೆ
ತಲೆಯಾನಿಸುವ ಮೊದಲು
ನೋವ ಹೇಳಿ ಹಗುರಾಗುವ
ಮೊದಲು ಯೋಚಿಸಬೇಕು
ನಾನೇ ಅವರೆದುರು
ಹಗುರಾಗುವ ಹೊತ್ತದೆಂದು..
ಯಾರೋ ನಮ್ಮ ನೋವ
ಹಗುರಾಗಿಸುವಂತಿದ್ದರೇ
ಜಗದ ಅದೆಷ್ಟೋ ಆಕ್ರಂದನಗಳು
ಕತ್ತಲಲಿ  ಕರಗಿಹೋಗುತ್ತಿರಲಿಲ್ಲ
ಮುಳುಗಿಹೋಗಿತ್ತಿರಲಿಲ್ಲ
ಸಾವಿನಾ ಸುಳಿಯಲಿ...... ಸುನೀ

ನವಿಲುಗರಿ

ನವಿಲುಗರಿಯದೇಕೆ ಇಂದು
ನನ್ನನಿಷ್ಟು ಕಾಡಿದೆ..
ಮನದ ಭಾವ ಕಲಕಿ ಬೆದಕಿ
ರೂಪವೊಂದು ಮೂಡದೆ..
ಪದಗಳೇಕೊ ಅಲ್ಲಿ ಇಲ್ಲಿ
ಅಲೆಯುವಂತೆ ಮಾಡಿದೆ..
ಬೆಳ್ಳಿಬೆಳಕದೇಕೋ 
ತಂಪು ಬೀರದೇ ಇದೆ..
ತಂಗಾಳಿಯಲೆಗೆ  ಕುರುಳು
ಕೆನ್ನೆ ತಾಕಿ ಅವನ ಬಿಸುಪ
ಭ್ರಮಿಸಿದೆ..
ಮಧುರ ನೆನಪದೊಂದು
ತುಟಿಯಂಚನು ತಿರುವಿದೆ...
ಕಂಗಳೆರಡು ಅದಾವುದೋ
ನೀರಿಕ್ಷೆಯಲಿ  ಕದಲಾಡಿದೆ ...
ನೀನು ಬರುವೆಯೆಂಬ
ಹುಸಿ ನುಡಿಯದು
ಮನವು ಪಿಸುಗುಡುತಿದೆ...
ಬಂದುಬಿಡು ಒಲವ ಸುರಿಸಿಬಿಡು
ನವಿಲೇ ನಾನಾಗುವೆ..
ಈ ಗರಿಯ ನಿನ್ನ ಶಿರಕೆ ಮುಡಿಸಿ
ಸಾರ್ಥಕ್ಯದಿ ಮೆರೆಯುವೆ...... ಸುನೀ

ರಾಧೆಯಳಲು

ಕಳೆದು ಹೋಗಿದ್ದೇನೆ ನಿನ್ನ
ಹುಡುಕುವುದರಲ್ಲಿ ಕೃಷ್ಣಾ....
ನೀನೆಂದರೆ ನನ್ನೊಳಗಿನ ಸಂಭ್ರಮ
ನೀನೆಂದರೆ ನನ್ನೊಳಗಣ ಕಣ ಕಣ
ನಿನ್ನ ಕಾಣುವ ಹಂಬಲದಲಿ
ನನ್ನೊಳಗೇ ಅದೆನೋ ತಲ್ಲಣ
ನಿನ್ನೆದೆಗಾತುಕೊಳ ಬಯಸುವ  ಮಸ
ಕಣ್ಣ ಮೂಲೆಯಲೆಲ್ಲೋ ಸಣ್ಣ
ಬಿಂದು ಜಾರಿಬಿಡುವ ಕ್ಷಣ
ಬೊಗಸೆಯಲಿ  ಮೋರೆ ಹುದುಗಿಸಬೇಕಿದೆ
ನಿನ್ನಾಸರೆಯಿಲ್ಲದೇ‌ ಈಗ ನಾ ... ಸುನೀ

ವಿಸ್ಮಯ

ಒಂದೇ ಹೂವ ಚುಂಬಿಸಲು
ದುಂಬಿಗೇನು ಮರುಳೆ
ಸೆಳೆಯದಿಹುದೇ ಕಣ್ಣದಕೆ
ನೂರು ಹೂವು ಅರಳೆ...
ಬಣ್ಣ ಬಣ್ಣ ಸೆಳೆಯೆ‍ ಮನ
ಚಂಚಲವೂ ಚಪಲವದಕೆ ಚಿಂತನ
ಒಂದೇ ಹೂವಿಗೊಂದೇ ದುಂಬಿ
ಸ್ವಂತವೇನೂ ಅಲ್ಲ..
ಪ್ರಕೃತಿಯೆಂಥ ವಿಸ್ಮಯದೊಡಲು
ಭಿನ್ನ ಭಿನ್ನ ವೆಲ್ಲಾ..... ಸುನೀ

ರಾಗ- ಭಾವ

ಒಂದು ಹೂವಿಗೊಂದೇ ದಿನ
ಬಾಡುವುದು ಸಂಜೆಗೇ
ಭಾವ ತೋರಲಾರದದು
ಅರಳುವುದು ಘಮ್ಮನೆ..
ಮನಸ ಹೊಂದೆ ಮನುಜ ತಾನು
ಸೋಲೆ ಭಾವ ರಾಗದಲಿ
ನಿಮಿಷಗಳೋ ವರುಷಗಳೋ
ತಿಳಿಯದಿರುವ ಸಮಯದಲಿ
ನರಳುವನು ತನ್ನ ಬಲೆಗೆ ತಾನೆ
ಸಿಲುಕಿ ಸುಮ್ಮನೆ.....ಸುನೀ

ಶುಭೋದಯ

ಒಪ್ಪಂದ

ಬದುಕಿನೊಂದಿಗೆ ಒಪ್ಪಂದ
ಮಾಡಿಕೊಂಡಿದೆ ಜೀವನ..
ತುಡಿತಗಳೆನೋ ಸಾವಿರಾರು
ಆರಿಸಿಕೊಳ್ಳುವ ತಾಳ್ಮೆಯೂ ಇಲ್ಲ
ಅಥವಾ ಜಾಣತನವಿಲ್ಲ?
ಒಂದೊಮ್ಮೆ ಆರಿಸಿಕೊಂಡರೂ
ಅದರಲ್ಲೂ ಕೊಂಕು
ಅಂಕು- ಡೊಂಕು  ಹುಡುಕಿಯೇ
ತೀರುತ್ತೇವೆ
ತೃಪ್ತಿ ಯೇ ಹೊಂದದ ಮನಸು
ಏಕಾಂಗಿತನಕೆ ಕಾರಣವೇ  ಬೇರೇ ಬೇಕಿಲ್ಲ
ಇವೆಲ್ಲದೂ ಇವೆಯಲ್ಲ
ಮತ್ತಾರ ದೂರಿ ಸಮಧಾನ ಹೊಂದುವುದು??
ಋಣ ಮುಗಿಯುವುದಿಲ್ಲಎಂದೂ
ಆಸೆಗಳ ಕೊಂಡಿಗೆ ಜೋತುಬಿದ್ದಿರುವ ತನಕ
ಅದು ಹರಿಯದ‌ ಹೊರತೂ
ನಾವು ಬೀಳುವುದಿಲ್ಲ
"ನಾ" ಬಿಡದ ಹೊರತೂ
ಅದೂ ಬಿಡದು‌
ನಡೆಯುತ್ತದೆ ಹೀಗೇ
ಬದುಕಿನೊಂದಿಗಿನ
ಜೀವನದ ಒಪ್ಪಂದ... ..ಸುನೀ

ಕವಿತೆ

ಒಮ್ಮೆ ಕವಿತೆಗೂ ಬೇಸರವಾಗಿಬಿಟ್ಟಿತು
ಎಲ್ಲದಕೂ ತಾನೆ ಬೇಕೇ
ಅದೆಷ್ಟು ಭಾವಗಳ ಕಕ್ಕುವುದು
ಬಿಕ್ಕುವುದು????
ನನಗೂ ಬೇಡವೇ ವಿಶ್ರಾಂತಿ?
ಓ ಭಾವಗಳೆ ಸುಳಿಯದಿರಿ ನನ್ನತ್ತ
ಬೆರಳುಗಳೇ ಕೊರೆಯದಿರಿ ನನ್ನ
ಅಕ್ಷರಗಳೆ ಮೂಡದಿರಿ
ಬಿಡಿ ನನ್ನ ಪಾಡಿಗೆನ್ನ
ಒಮ್ಮೆ ಮೌನವಾಗಬಿಡಿ
ಮತ್ತೆ ಹೊಸದಾಗಿ ಚಿಗುರಲು
ಸಮಯವ ಕೊಡಿ..
ಹೀಗೆಂದು‌ ಬಿಕ್ಕಿದ ಕವಿತೆಯನ್ನೇ
ಕವಿ ತನ್ನ ಸ್ವಾರ್ಥಕ್ಕೆ ಬಳಸಿಕೊಂಡುಬಿಟ್ಟ
ಅದನೇ ಚಂದದ ಕವನವಾಗಿಸಿಬಿಟ್ಟ..... ಸುನೀ

ತಳಮಳ

ಮನವ ಅನುನಯಿಸುವುದು
ಬಲುಕಷ್ಟ..
ಕೂತರೂ ನಿಂತರೂ
ಬಿಡಲಾರದ ತುಮುಲ..
ಅಲೆದು ಬಾರೆಂದರೇ
ಹೋಗುವುದೂ ಇಲ್ಲ..
ಬಿಮ್ಮನೆ ಬಿಗಿದು ಕುಳಿತಿದೆಯೇಕೋ..
ಕಣ್ಣೆವೆಯಾ ಮುಚ್ಚಲೂ
ಬಿಡುವುದಿಲ್ಲ
ಎದೆಯೊಳಗಿನ ಉಸಿರ
ಸರಾವಾಗಿಸುವುದೂ ಇಲ್ಲ..
ಚೆಲ್ಲಾಪಿಲ್ಲಿಯಾದ ಭಾವಗಳ
ಜೋಡಿಸಲೇ ಆಗುತ್ತಿಲ್ಲ..
ಮೌನ ದ್ರವಿಸುವ ಹೊತ್ತೇ
ತಿಳಿಯುತ್ತಿಲ್ಲಾ.....ಸುನೀ

ಒಲವ ಹನಿ

ಮಳೆಗೆ ಮೊದಲು ಬಂದ
ಸುಳಿಗಾಳಿಗೆ ಜೀಕಿತ್ತು
ಗಿಡ ಮರ..
ತೇಲಿತ್ತು ಹೂವು ಎಲೆ ಬಳ್ಳಿ..
ಆ ಕ್ಷಣ ‌ನಾನು‌
ಜೀಕಿದ್ದೆ ನಿನ್ನ ನೆನಪ
ಜೋಕಾಲಿಯಲಿ.
ಪ್ರತೀ ಮಳೆಯಲ್ಲೂ
ಹೊಸತನವಿತ್ತು..
ಪ್ರತೀ ಹನಿಯಲ್ಲೂ
ನಿನ್ನದೇ ಪ್ರತಿಬಿಂಬವಿತ್ತು.
ನಿನಗೂ ನನದೇ ಹಂಬಲವಿತ್ತು..
ನಿನ್ನೊಲವೂ ಪ್ರತೀ‌ ನಿಮಿಷ
ತುಂತುರಾಗಿ ಹನಿಯುತಿತ್ತು..
ಈಗೇಕೋ ಬರೀ ಮೋಡವಷ್ಟೇ
ಮುಸುಕುತ್ತಿದೆ..
ಸುಳಿಗಾಳಿಯೂ ಇಲ್ಲ
ಹನಿಯುವುದೂ ಇಲ್ಲ..
ನಿನ್ನೊಲವೂ ಕೂಡ
ಅದರಂತೆ......ಸುನೀ

ನೀನೇ ನಾನಾಗುವ ತವಕ

ಮೌನವಿಡಿಯಾಗಿ ಕೊಲ್ಲುವ ಮುನ್ನ
ಉಳಿಸಿಕೋ ನಿನ್ನ ಮಾತಿಂದ ನನ್ನ...
ನಿನ್ನ ಬಾಹುಗಳಿಗೆ ಶರಣಾಗುವೆ
ಕುಸಿದುಬೀಳುವ ಮುನ್ನ ಅಪ್ಪಿಕೋ ಎನ್ನ...
ನಿನ್ನ ಪ್ರೀತಿಗೆನ್ನ ಕಂಗಳು ತುಂಬಿದರೆ
ಕಂಬನಿ ಜಾರುವ ಮುನ್ನ  ಒಮ್ಮೆ
ತಡೆದು ಬಿಡು  ನಿನ್ನ ತುಟಿಗಳಲಿ ಆದನ....
ಹೆಚ್ಚೇನು ಹೇಳಲಿ ?
ನೀನೆ ನಾನಾಗುವ ತವಕ
ಒಪ್ಪಿಸಿಕೊಂಡುಬಿಡು ನನ್ನ....ಸುನೀ

Thursday, April 11, 2019

ಅವಶ್ಯಕತೆ

ಒಂದೊಮ್ಮೆ ಬಂಧಗಳ
ಜರೂರತ್ತಿಗೆಒದ್ದಾಡುತಿದ್ದೆ
ಹಿಡಿ ಪ್ರೀತಿಯ ಕೊಳಲು
ಕೊಡಲು ಕಾಯುತಿದ್ದೆ
ಈಗನಿಸುತ್ತಿದೆ ಭ್ರಮೆಯ
ಹರಿವಿನೊಳಗೆ ತೇಲುತಿದ್ದೆ ನಾ
ದೈನೇಸಿತನದ ಪರಮಾವಧಿಯಾಗಿದ್ದೆನಾ?
ಪ್ರೀತಿ ಯಾರ ಸೊತ್ತೂ ಅಲ್ಲ ..ಬಂಧಗಳೂ.
ನೀರೀಕ್ಷೆಗಳೇಂದೂ ಸುಳ್ಳಾಗುವುದಿಲ್ಲಾ
ಬೇಕಾಗಿರುವುದರ ಹಿಂದೆ ಓಡುವುದ
ಬಿಡುವುದ ತನಕ
ಮುಖ ತಿರುಗಿಸಿ ನಿಂತಿದ್ದೇನೀಗ
ಯಾವ ಪ್ರೀತಿಯ ಬೇಡಿಕೆಗಳೂ ಇಲ್ಲ
ಯಾವ ಬಂಧಗಳ‌ ಜರೂರತ್ತೂ  ಕಾಣುತ್ತಿಲ್ಲ
ಹೃದಯವೀಗ ಖಾಲೀ ಕೊಡ
ಅರಿವಿನ ಹಿಂದೆ ಬಿದ್ದಿದೆ ಮನಸು
ಭಾವನೆಗಳು ಬರಿದಾಗಿವೆ
ಅದರೂ ಬದುಕಬೇಕಿದೆ 
ಬದುಕು ನೀಡಿದವರಿಗಾಗಿ
ಮಿಡಿಯಬೇಕಿದೆ ಹೃದಯ
ಸ್ವಾರ್ಥವಿಲ್ಲದ ಪ್ರೀತಿಯಾಗಿ..... ಸುನೀ

ಒಮ್ಮೆ ಕವಿತೆಗೂ ಬೇಸರವಾಗಿಬಿಟ್ಟಿತು
ಎಲ್ಲದಕೂ ತಾನೆ ಬೇಕೇ
ಅದೆಷ್ಟು ಭಾವಗಳ ಕಕ್ಕುವುದು
ಬಿಕ್ಕುವುದು????
ನನಗೂ ಬೇಡವೇ ವಿಶ್ರಾಂತಿ?
ಓ ಭಾವಗಳೆ ಸುಳಿಯದಿರಿ ನನ್ನತ್ತ
ಬೆರಳುಗಳೇ ಕೊರೆಯದಿರಿ ನನ್ನ
ಅಕ್ಷರಗಳೆ ಮೂಡದಿರಿ
ಬಿಡಿ ನನ್ನ ಪಾಡಿಗೆನ್ನ
ಒಮ್ಮೆ ಮೌನವಾಗಬಿಡಿ
ಮತ್ತೆ ಹೊಸದಾಗಿ ಚಿಗುರಲು
ಸಮಯವ ಕೊಡಿ..
ಹೀಗೆಂದು‌ ಬಿಕ್ಕಿದ ಕವಿತೆಯನ್ನೇ
ಕವಿ ತನ್ನ ಸ್ವಾರ್ಥಕ್ಕೆ ಬಳಸಿಕೊಂಡುಬಿಟ್ಟ
ಅದನೇ ಚಂದದ ಕವನವಾಗಿಸಿಬಿಟ್ಟ..... ಸುನೀ

ಮನವ ಅನುನಯಿಸುವುದು
ಬಲುಕಷ್ಟ..
ಕೂತರೂ ನಿಂತರೂ
ಬಿಡಲಾರದ ತುಮುಲ..
ಅಲೆದು ಬಾರೆಂದರೇ
ಹೋಗುವುದೂ ಇಲ್ಲ..
ಬಿಮ್ಮನೆ ಬಿಗಿದು ಕುಳಿತಿದೆಯೇಕೋ..
ಕಣ್ಣೆವೆಯಾ ಮುಚ್ಚಲೂ
ಬಿಡುವುದಿಲ್ಲ
ಎದೆಯೊಳಗಿನ ಉಸಿರ
ಸರಾವಾಗಿಸುವುದೂ ಇಲ್ಲ..
ಚೆಲ್ಲಾಪಿಲ್ಲಿಯಾದ ಭಾವಗಳ
ಜೋಡಿಸಲೇ ಆಗುತ್ತಿಲ್ಲ..
ಮೌನ ದ್ರವಿಸುವ ಹೊತ್ತೇ
ತಿಳಿಯುತ್ತಿಲ್ಲಾ.....ಸುನೀ

ಕನಸುಗಳು ಮುಗಿಯುವುದಿಲ್ಲ
ಯಾರ ವಿದಾಯದೊಂದಿಗೂ
ಕರಗುವುದೂ ಇಲ್ಲ ಕಣ್ಣ ಹನಿಯೊಂದಿಗೂ
ಚಿಗಿತುಕೊಳ್ಳುತ್ತವೇ ಮತ್ತೆ
ಹೊಸದಾಗಿ ಬದುಕುವ
ಭರವಸೆಯೊಂದಿಗೆ..
ಹೋದವರೊಂದಿಗಿನ ಅನುಭವಗಳ
ಮೆಲುಕಿನೊಂದಿಗೆ
ಅವರಿಟ್ಟ ಆದರ್ಶಗಳ
ಮೆಟ್ಟಲುಗಳ ತುಳಿಯುತ್ತಾ ನೀವೂ
ಆದರ್ಶರಾಗಿ ಎಲ್ಲರಿಗೆಂದು.... ಸುನೀ