Wednesday, October 31, 2018

ಇಲ್ಲಿ ಮಳೆ ☺

ಬಾಂದಳಕೆ ಭೂ ರಮೆಯ ಕಂಡು
ವಿರಹ ಹೆ‍ಚ್ಚಾಯಿತೇನೋ..
ಮೌನ  ಹೆಪ್ಪುಗಟ್ಟಿ ಮೋಡವಾಯಿತೇನೋ
ಪ್ರೀತಿ ವರ್ಷಧಾರೆಯಾಯಿತು
ಭುವಿಯೊಡಲು ತಂಪು ತಂಪು
ಸುತ್ತೆಲ್ಲಾ ಮಣ್ಣ ಕಂಪು
ಗರಿಬಿಚ್ಚಿತು ನಿನ್ನ ನೆನಪು...ಸುನೀ