ಇದೇ ಕೊನೇ ಮಾತ ರಾಜಿವ್..ನಾ ಹೇಳೋದನ್ನ ಅರ್ಥ ಮಾಡ್ಕೊಳ್ಳಿ ದಯವಿಟ್ಟು.... ಮತ್ತೆ ಪಶ್ಚಾತಾಪ ಪಟ್ರೆ ಉಪಯೋಗ ಇಲ್ಲ.. ನಾ ಸಿಗೋಲ್ಲ .... ಗಂಟಲು ಕಟ್ಟಿದ ದನಿಯಲ್ಲಿ ಕಣ್ಣಲ್ಲಿ ಜಿನುಗುತ್ತಿದ್ದ ಹನಿಯನ್ನು ಒರೆಸಿಕೊಳ್ಳುತ್ತಾ ಹೇಳಿದಳು.. ಆ ಕಡೆ ವೀಡಿಯೋ ಕಾಲ್ ನಲ್ಲಿದ್ದ ರಾಜೀವ ಒಂದು ಕ್ಷಣ ಅವಳನ್ನು ನೋಡಿ..... ನಾನೇನು ದೂರ ಹೋಗು ಅಂತ ಹೇಳ್ತಾ ಇಲ್ವಲ್ಲಾ..? ನೀನೆ ಹೋಗ್ತೀನಿ ಅಂತಿರೋದು.. ನಾನಂತು ನಿನ್ನ ಬೀಡೋಲ್ಲ ಅಂತ ಹೇಳಿದಿನಿ...
ಇನ್ನು ನಿನ್ನ ಇಷ್ಟ .. ಅಂದ. ಕಾಲ್ ಕಟ್ ಮಾಡಿದಳು ಅಂಜಲಿ..
ಅತ್ತ ರಾಜೀವ್" ಇವಳದ್ದು ಯಾವಾಗಲು ಇದ್ದದ್ದೆ..ನನ್ನ ಸ್ವಭಾವವೇ ಹಾಗೆ ..ಎಲ್ರನ್ನೂ ಪ್ರೀತಿ ಮಾಡ್ತೀನಿ .. ಮಾತಾಡ್ತೀನಿ ಅಂದ ಮಾತ್ರಕ್ಕೆ ಎಫ಼್ ಬಿ ನಲ್ಲಿ ಇರೋ ಎಲ್ಲಾ ಹೆಣ್ಮಕ್ಳನ್ನಾ ಪ್ರೀತಿ ಮಾಡ್ತೀನಿ ಅಂಥ ಅರ್ಥಾನಾ??? ಅವ್ರುಗಳ ಮನಸ್ಸಿಗೆ ನೋವಾಗ್ಬಾರ್ದು ಅಂತ ಮಾತಾಡ್ತೀನಷ್ಟೆ..ನಂಗೆ ಗೊತ್ತು ಪ್ರೀತಿ ಅಂದ್ರೆ ಏನು.. ಅಂತ .. ಎಲ್ಲರ ಪ್ರೀತಿಯಿಂದ ವಂಚಿತ ಆದವ್ನುನಾನು.. ಸಣ್ಣ ಹುಡುಗನಿದ್ದಗಿನಿಂದಲೂ ಪ್ರೀತಿಗೆ ಹಾತೊರೆದವ.. ತಂದೆ ತಾಯಿಯನ್ನು ಕಳೆದುಕೊಂಡವನು.. ಆನಂತರ ಬಯಸಿದ ಪ್ರೀತಿ ಸಿಗಲಿಲ್ಲ.. ಅಣ್ಣನ ಅಂಕೇಲಿ ಬೆಳೆದೆ.ಈಗ ಸ್ವತಂತ್ರ ಜೀವನ.. ಈಗ ಬಯಸಿದ್ದು ಸಿಗ್ತಾಯಿದೆ ..ಅನುಭವಿಸ್ತಿನಪ್ಪ.. ತಪ್ಪೇನು.. ನನ್ನ ಹಾಗ್ ಮಾಡ್ಬೇಡ ಹೀಗ್ ಮಾಡ್ಬೇಡ ಅಂತ ಕಟ್ಟಿಹಾಕೋದು ಇಷ್ಟ ಇಲ್ಲ ನಂಗೆ.. ಯಾರ ಮಾತು ಕೇಳೋಲ್ಲ.. ಇನ್ನು ಇವ್ಳು ಸ್ನೇಹಿತೆ.. ಅಷ್ಟೇ.. ಇವ್ಳೇನು ಉಪದೇಶ ಮಾಡೋದು ನಂಗೆ... ಎಲ್ಲಿ ಹೋಗ್ತಾಳೆ.. ಇನ್ನು ಸ್ವಲ್ಪ ಹೊತ್ತಲ್ಲಿ ಸಂದೇಶ ಬರತ್ತೆ.. ನಂಗೆ ಗೊತ್ತಿಲ್ವ? ಅವಳೆಷ್ಟು ನನ್ನ ಹಚ್ಚಿಕೊಂಡಿದಾಳೆ ಅಂತ.."" ಹಾಗಂದುಕೊಂಡು ಮೆಲ್ಲನೆ ನಕ್ಕ..ಸಮಯ ನೋಡಿಕೊಂಡ..ಸಂಜೆ ೬ ಘಂಟೆ.. ಇನ್ನೊಬ್ರು ಬರೋರಿದ್ರು.. ಬಂದು ಹೋದಮೇಲೆ ಮನೆಗೆ ಹೋಗೋಣ ಅಂತ ಅಂದ್ಕೊಂಡು ಕುರ್ಚಿಗೊರಗಿ ಕಣ್ಣು ಮುಚ್ಚಿದ..
ಒಂದು ಕ್ಷಣ ಅಂಜಲಿ ಕಣ್ಮುಂದೆ ಬಂದಳು.. ಅಂತಾ ರೂಪವಂತೆ ಏನೂ ಅಲ್ಲ.. ಆದರೆ ಸ್ನೇಹಮಯೀ.. ಮುದ್ದು ನಗು.. ಮ್ರುದು ಮನಸ್ಸು..ಎಫ಼್ ಬಿ ನಲ್ಲಿ ಪರಿಚಯ.. ಅಮೆಲೆ ಸ್ನೇಹ.. ಅದ್ಯಾಕೋ ಗಾಢವಾಗಿ.. ಹಚ್ಚಿಕೊಂಡಿದ್ದಳು ನನ್ನ..
ಅದು ಸ್ನೇಹವಾ ಪ್ರೀತಿಯಾ? ಯೋಚಿಸಿರಲಿಲ್ಲ ಹಾಗೆಲ್ಲಾ. ಆದರೇ ತುಂಬಾ ಕಾಳಜಿ ವಹಿಸುವ.. ಮೆಸ್ಸೇಜ್ ಮಾಡಲು ಸ್ವಲ್ಪ ತಡವಾದರೂ ಗಾಬರಿಗೊಳ್ಳುವ.. ಕಾಲ್ ಮಾಡಿದರೇ ತಾನೇನು ಮಾಡಿದೆ ಎನ್ನುವುದರಿಂದ ಹಿಡಿದು ನೀ ಯಾಕೆ ಹೀಗೆ ಮಾಡಿದ್ದು ಅನ್ನುವುದರೊಂದಿಗೆ ಕೊನೆಯಾಗುವ ಅವಳ ಮನಸ್ಥಿತಿ ಎಂತದ್ದೋ ತಿಳಿಯದಾಗಿತ್ತು..ಫೋನ್ ಟಿಂಗ್ ಅಂತು.. ನಕ್ಕ.. ಆಗ್ಲೇ ಬಂತಲ್ಲ ಮೆಸ್ಸೇಜು ಓಪನ್ ಮಾಡಿದರೆ ಇನ್ಯಾರದ್ದೋ ಮೆಸ್ಸೇಜ್...ಒಂದು ಕ್ಷಣ ನಿರಾಸೆ ಆವರಿಸಿತು.. ಹಾಗೆ ಇಟ್ಟ ಮೇಜಿನ ಮೇಲೆ.. ಯಾರದ್ದು ಏನು ಎಂದು ನೋಡಲು ಮನಸ್ಸಾಗಲಿಲ್ಲ..
ತನ್ನ ಈಗಿನ ಮನಸ್ಥಿತಿಗೆ ಅಚ್ಚರಿಯಾಯಿತು ಒಂದು ಕ್ಷಣ.. ಅವಳ ಬಗ್ಗೆಯೇ ಯೊಚಿಸುತ್ತಿದ್ದರಿಂದ ಇರಬಹುದೆಂದುಕೊಂಡ..
ಸಮಯ ಸರಿಯ ತೊಡಗಿತು.. ಕ್ಲೈಂಟ್ಸ್ ಬಂದು ಹೋದ್ರು.. ಇನ್ಯಾರದ್ದೂ ಅಪಾಯಿಂಟ್ಮೆಂಟ್ ಇಲ್ಲದ ಕಾರಣ ಮನೆಗೆ ಹೋಗಿಬಿಡೋಣ ಅಂದುಕೊಂಡ. ಅವನದ್ದು ಕೌನ್ಸಿಲಿಂಗ್ ಸೆಂಟರ್. ಅಪಾಯಿಂಟ್ಮೆಂಟ್ ಇದ್ದ ಹಾಗೆ.ಇಂದೂ ಕೂಡ ಬೇಗ ಮುಗಿದಿತ್ತು...
ಮರ್ತಿದ್ದ ಮೊಬೈಲ್ ಕೈಗೆ ಬಂತು..ತುಂಬಾ ಮೆಸ್ಸೇಜುಗಳಿದ್ವು.. ಮನೆಗೆ ಹೋಗಿ ನೋಡೋಣ ಅಂದುಕೊಂಡು ಶಾಪ್ ಕ್ಲೋಸ್ ಮಾಡಿ ಹೊರಟ. ಮನೆಗೆ ಹೋದ. ಮೇಲೆ ಮತ್ತೆಲ್ಲಾ ಮರೆಯಿತು..ಅಣ್ಣನ ಮಗಳ ಜೊತೆ ಆಟ..ಅತ್ತಿಗೆಗೆ ಅಡಿಗೆಗೆ ಸಹಾಯ.. ಮತ್ತೆ ಸ್ವಲ್ಪ ಸ್ವಂತದ ಕೆಲ್ಸ.. ಅಂತೂ ರಾತ್ರಿ ಊಟದ ನಂತ್ರ ಸ್ವಲ್ಪ ಬಿಡುವು..ಹಾಸಿಗೆ ಮೇಲೆ ಕೂತವನು ಮೊಬೈಲ್ ಕೈಗೆ ತೆಗೆದುಕೊಂಡ.. ತುಂಬಾ ಸಂದೇಶಗಳಿದ್ವು.. ಎಲ್ಲದಕ್ಕೂ ಚುಟುಕಾಗಿ ಉತ್ತರಿಸಿ ಸುಮ್ಮನಾದ..
ಅಂಜಲಿಯ ಸಂದೇಶ ಇರಲಿಲ್ಲ. ಸಾಮನ್ಯವಾಗಿ ಅಷ್ಟು ಹೊತ್ತಲ್ಲಿ ಅವಳ ಮೆಸ್ಸೇಜ್ ಇರುತ್ತಿರಲಿಲ್ಲ.. ಹಾಗಾಗಿ ಬೆಳಿಗ್ಗೆ ಮಾಮುಲಿನಂತೆ ಮಾಡ್ತಾಳೆಎಂದು ಸುಮ್ಮನಾದ.ಯಾಕೋ ತೀರ ಸುಸ್ತಾದಂತೆನಿಸಿ ಮಲಗಿಬಿಟ್ಟ.
ಇತ್ತ.. ಅಂಜಲಿಗೆ ಅವನ ಮಾತು ಭರ್ಜಿ ಹಾಕಿದಂತಿತ್ತು.. ಅವನನ್ನು ಅರ್ಥ ಮಾಡಿಕೊಳ್ಲುವುದೇ ಕಷ್ಟವೆನಿಸಿತ್ತು.. ನಿನ್ನಂತೆ ಯಾರು ಪ್ರೀತಿ ಕಾಳಜಿ ಮಾಡುವುದಿಲ್ಲವೆನ್ನುತಾನೆ.. ಆದರೆ ನಿನ್ನ ಹಾಗೆ ಇನ್ನು ತುಂಬಾ ಜನ ನನ್ನ ಜೊತೆ ನಡ್ಕೊಂಡ್ರೆ ಹೀಗೆ ಎಷ್ಟು ಚಂದ ಎನ್ನುತ್ತಾನೆ. ಆ ಮಾತು ಕೇಳಿ ಒಂದು ಕ್ಷಣ ಅವಳೆದೆಬಡಿತ ನಿಂತಂತೆ ಆಗಿತ್ತು..
ಮುಖ ಪುಸ್ತಕದ ಪರಿಚಯ ಇಂದು ಪ್ರೀತಿಯಾಗಿ ಅವಳೆದೆಯಲ್ಲಿ ನಿಂತಿತ್ತು.. ಆದರವನಿಗೆ ಹೇಳಿರಲಿಲ್ಲ.. ಯಾವ ಸ್ವಾರ್ಥವೂ ಇಲ್ಲದೇ ನಿಷ್ಕಲ್ಮಷವಾಗಿ ಪ್ರೀತಿಸುತ್ತಿದ್ದಳು.. ಆದರೇ ಅವನ ನಡವಳಿಕೆ ನುಂಗಲಾರದ ತುತ್ತಾಗಿತ್ತು.
ನೋಡಲು ತುಂಬಾ ಅಂದವಾಗಿದ್ದ ಅವನ ಹಿಂದೆ ಹೆಣ್ಣುಗಳ ದಂಡಿಗೇನು ಕೊರತೆ ಇರಲಿಲ್ಲ.. ಅವನನ್ನು ಓಲೈಸುವ ಅವನ ಬರಹಗಳಿಗೆ ಕಾಮೆಂಟಿಸುವ ಚೆಲುವೆಯರಿಗೇನು ಕೊರತೆ ಇರಲಿಲ್ಲ. ಆದರೇ ಎಲ್ಲರಂತೆ ಇವಳಿಲ್ಲ.ಅದು ಅವನಿಗೂ ಗೊತ್ತು.. ಇವಳು ಮಾತಡದಿದ್ದರೇ ಮೆಸ್ಸೇಜು ಬರುತ್ತಿತ್ತು" ಏನು ಮಾಡ್ತಾ ಇದ್ದೀ"ಅಂತಾನೋ ಅಥವಾ ಯವುದಾದರು ಜೋಕ್ ಕಳಿಸುತಿದ್ದ.ಆಗ ನನ್ನ ನೆನಪಾಗಿದೆ ಎಂದು ಅವಳಂದುಕೊಳ್ಳಬೇಕು.. ಒಮ್ಮೊಮ್ಮೆ ಮೆಸ್ಸೇಜೆ ಇಲ್ಲದಾಗ ಗಾಬರಿಯಾಗುತ್ತಿದ್ದಳು.. ಏನಾಯಿತಪ್ಪ ಎಂದು ಏನೆಲ್ಲ ಕಲ್ಪಿಸಿಕೊಂಡು ಕನಲುತ್ತಿದ್ದಳು.. ಆದರೆ ಎಫ಼್ ಬಿನಲ್ಲಿ ಆನ್ಲೈನ್ ಇರುವುದನ್ನು ಕಂಡು ಎಲ್ಲೋ ಹುಡುಗಿಯರ ಜೊತೆ ಚಾಟಿಂಗ್ ಇರ್ಬೇಕು ಅದ್ಕೇ ನಾ ನೆನಪಾಗ್ಲಿಲ್ಲ ಅಂತ ಸಿಟ್ಟಾಗುತ್ತಿದ್ದಳು.. ಅವ ಎಷ್ಟೊ ಸಲ ಹೇಳಿದ್ದ ಆಫ಼ೀಸ್ನಲ್ಲಿದ್ದಾಗ ಎಫ಼್ ಬಿ ಆನ್ ಇರತ್ತೆ ಕಂಪ್ಯೂಟರ್ ನಲ್ಲಿ.. ಆದ್ರೆ ನಾ ಇರೊಲ್ಲ ಆನ್ ಲೈನ್ ಅಂತ.. ಆದ್ರೆ ಅವನ ಕಾಮೆಂಟ್ಗಳು ಬೇಡವೆಂದ್ರೂ ಕಣ್ಣಿಗೆ ಬೀಳುವಾಗ ಮನದಲ್ಲಿ ಮುಳ್ಳು ಚುಚ್ಚಿದ ಅನುಭವ.. ಕೇಳಿದರೇ ಅವೆಲ್ಲ ಸುಮ್ನೇ ಹಾಕ್ತೀನಷ್ಟೇ ಅಂತಿದ್ದ..
ಬೇಡ ರಾಜಿವ್ ಹೆಣ್ಣು ಮಕ್ಳ ಮನ್ಸಲ್ಲಿ ಆಸೆ ಹುಟ್ಟಿಸ್ಬೇಡಿ.. ಆಮೇಲೆ ನೀವು ಎಲ್ಲರ ಜೊತೆ ಒಂದೇ ರೀತಿ ಇರ್ತೀರಿ ಅಂತ ತಿಳಿದ್ರೆ ಅವರುಗಳು ದಂಗೆ ಎದ್ದಾರು ಎಂದು ತಮಾಷೆಯಿಂದಲೇ ತಿಳಿ ಹೇಳುತ್ತಿದ್ದಳು... ಆದ್ರೇ ಅವನು ಅದನ್ನು ತಮಾಷೆಯಾಗೇ ತೆಗೆದುಕೊಳ್ಳುತ್ತಿದ್ದ.
ಬರು ಬರುತ್ತಾ ಅವನ ನಡವಳಿಕೆ ಯಾಕೋ ಅವಳಿಗೆ ಅಸಹನೀಯವೆನಿಸುತಿತ್ತು. ಅವರಿಬ್ಬರೂ ಒಂದೆರಡು ಸಲ ಭೇಟಿಯಾಗಿರಬಹುದು..ಆಗ ಅವನು ಮೆತ್ತಗೇ ಅವಳನ್ನಪ್ಪಿ ಹಣೆಗೊಂದು ಬೆಚ್ಚನೆಯ ಮುತ್ತಿಟ್ಟಿದ್ದು ಬಿಟ್ಟರೆ ಬೇರೆ ಯಾವುದೇ ರೀತಿಯಲ್ಲಿ ಕೆಟ್ಟದಾಗಿ ನಡೆದು ಕೊಂಡಿರಲಿಲ್ಲ. ಅದೂ ಕೂಡ ಅವಳ ಒಪ್ಪಿಗೆಯಿತ್ತ ಮೇಲೆ ..
ಆದರೇ ಈಗೀಗ ಅವನು ಎಲ್ಲರ ಬಳಿಯೂ ಹೀಗೇ ಇರಬಹುದೇ ಎನ್ನುವ ಆತಂಕ ಅವಳನ್ನು ಕಾಡತೊಡಗಿದ್ದು ಸುಳ್ಳಲ್ಲ. ಕೇಳಿದರೆ ನಾ ನಿನ್ನ ಬಳಿ ಇರುವಂತೇ ಯಾರ ಬಳಿಯೂ ನಡೆದುಕೊಳ್ಳುವುದಿಲ್ಲ ಎನ್ನುತ್ತಿದ್ದ.. ಅವನಿಗೆ ತನ್ನ ಮೇಲೆ ಪ್ರೀತಿ ಹುಟ್ಟಿದೆಯೋ ಇಲ್ಲವೋ ತಿಳಿಯದಾಗಿತ್ತು.ಅದಕ್ಕೆ ಅವಳೊಂದು ನಿರ್ಧಾರಕ್ಕೆ ಬಂದಳು.. ಅದೇ ಬೆಳಿಗ್ಗೆಯ ಘಟನೆ.. ಮಾರನೆ ದಿನ ಬೆಳಿಗ್ಗೆ ಬೇಗ ಎಚ್ಚರವಾಗಿಬಿಟ್ಟಿತ್ತು ರಾಜೀವನಿಗೆ.. ರಾತ್ರಿಯೆಲ್ಲಾ ಎಂತದೋ ಕನಸುಗಳು.ಅರೇಬರೇ ನೆನಪು.. ಹಾಸಿಗೆಯಲ್ಲಿ ಮಲಗಿಯೇ ಮೊಬೈಲ್ ನೋಡಿದ.. ಗುಡ್ ಮಾರ್ನಿಂಗ್ ಹಾಕಿ ಮೊಬೈಲನ್ನು ಚಾರ್ಜಿಗೆ ಹಾಕಿ ಬೆಳಗಿನ ಕೆಲಸಗಳಿಗೆ ಗಮನ ಕೊಟ್ಟ..ಆಮೇಲೆ ಅತ್ತಿಗೆ ಕೊಟ್ಟ ಕಾಫ಼ಿ ಕುಡಿಯುತ್ತಾ ಮೆಸ್ಸೆಜು ಗಳನ್ನ ನೋಡಿದ.. ಅಂಜಲಿಗೆ ಕಳಿಸಿದ ಮೆಸ್ಸೇಜ್ ಹೋಗಿರಲೇ ಇಲ್ಲ.ಯಾವಾಗಲು ಬೆಳಿಗ್ಗೆ ಇವನ ಮೆಸ್ಸೆಜಿಗೆ ಮೊದಲು ಉತ್ತರ ಕೊಡುವವಳು ಅವಳೇ ಆಗಿದ್ದಳು..ಎಲ್ಲೊ ಬಿಜಿ ಇರ್ಬೇಕು.. ನೆಟ್ ಆನ್ ಮಾಡಿಲ್ಲಾ ..ಅಂತ ಅಂದುಕೊಂಡು ತನ್ನ ಕೆಲ್ಸದ ಕಡೆ ಗಮನ ಕೊಟ್ಟ. ಆಫ಼ೀಸಿಗೆ ಹೊರಡುವ ಸಮಯದಲ್ಲಿ ಮೆಸ್ಸೇಜು ಬಂದಿರಬಹುದೆಂದು ಮತ್ತೊಮ್ಮೆ ನೋಡಿದ. ಆಗಲೂ ಹೋಗಿರಲಿಲ್ಲ. ಸಮಯ ಆದಾಗಲೇ ೧೧ ಆಗಿತ್ತು.ಯಾವಾಗಲೂ ಇಷ್ಟು ಹೊತ್ಗೆ ಅಂಜಲಿಯಿಂದ " ಆಫ಼ೀಸ್ ಗೆ ಬಂದ್ರಾ" ಅಂತ ಒಂದು ಹಗ್ ಮತ್ತು ಕಿಸ್ಸಿಂಗ್ ಸಿಂಬಲ್ ಯಾವಾಗ್ಲೂ ತಪ್ಪಿದ್ದಿಲ್ಲಾ. ಅದ್ರೇ ಇವತ್ತು ಅವನು ಕಳ್ಸಿದ ಮೆಸ್ಸೇಜೆ ಹೋಗಿರಲಿಲ್ಲ.ಪಿಚ್ ಅನಿಸಿತ್ತು.. ಸೀದಾ ಆಫ಼ೀಸಿಗೆ ಬಂದ.. ಅವತ್ತು ಪುರುಸೊತ್ತಿಲ್ಲದ ಹಾಗೆ ಕೆಲ್ಸ. ಅಂತೂ ೨ ಘಂಟೆಗೆ ಬಿಡುವಾಯ್ತು.. ಮೊಬೈಲ್ ಕೈಗೆ ಬಂತು.. ಸಿಕ್ಕಾಪಟ್ಟೆ ಸಂದೇಶಗಳು... ಎಲ್ಲವನ್ನೂ ನೋಡಿದ .. ಅಂಜಲಿಯ ಮೆಸ್ಸೇಜ್ ಮಾತ್ರ ಎಲ್ಲೂ ಇಲ್ಲ.. ಹಾಗೆ ಎಫ಼್ ಬಿ ತೆರೆದ.. ಅಲ್ಲಿ ಕೂಡ ಅವಳಿಲ್ಲ. ಅವಳ ಪ್ರೊಫ಼ೈಲ್ ನೋಡೋಣ ಅಂತ ಹೆಸರು ಹಾಕಿದ್ರೆ ಬರ್ತಾ ಇಲ್ಲ. ಅಂದ್ರೆ ಇಲ್ಲೂ ಡೀ ಆಕ್ಟೀವೇಟ್?.. ಆಗ ಮಾತ್ರ ತಲ್ಲಣಿಸಿತು ಹ್ರದಯ.. ಇಲ್ಲ ಹಾಗಿರೋಲ್ಲ ಅಂತ ಮತ್ತೆ ಮತ್ತೆ ಹುಡುಕಿದ..ಎಲ್ಲೂ ಇಲ್ಲ.. ಕಾಲ್ ಮಾಡಿ ನೋಡೋಣ ಅಂತ ಡಯಲ್ ಮಾಡಿದ.. ಆದ್ರೇ ಈ ನಂ ಅಸ್ತಿತ್ವದಲ್ಲಿ ಇಲ್ಲ ಅಂತ ಬರತೊಡಗಿತು..ನನ್ನ ಹೆದರ್ಸೋಕೆ ಹೀಗೆಲ್ಲ ಮಾಡ್ತಿರ್ಬೇಕು. ಹುಚ್ಚು ಹುಡುಗಿ ಅಂತ ಆಂದುಕೊಂಡ.
ಅರೇ ಇದೇನಿದೂ .. ಇವಳಿಗಾಗಿ ನಾನು ಯಾಕಿಷ್ತು ಚಡಪಡಿಸ್ತಿದೀನಿ .. ಎಷ್ಟೊಸಲ ನಾನೆ ಮಾಡ್ತಿರಲಿಲ್ಲ.. ತಲೆ ಕೊಡವಿಕೊಂಡು ಮನೆಗೆ ನಡೆದ..ಆ ದಿನವೂ ಇದೇ ಕಥೆ.. ಹೀಗೆ ಎರಡು ದಿನಗಳು ಕಳೆದವೂ..ಅವಳ ಮೆಸ್ಸೇಜ್ ಇಲ್ಲ.. ಕಾಲ್ ಮಾಡಿದ್ರೆ ಅದೇ ಹಾಡು. ಯಾಕೋ ಬೇರೆ ಮೆಸ್ಸೇಜುಗಳನ್ನು ನೋಡಲು ಬೇಸರವೆನಿಸತೊಡಗಿತು.. ಅಂಜಲಿಯ ಹಾಗೆ ಕಾಳಜಿ ಯಿಂದ ಮಾತನಾಡುವ ಯಾವ ಹೆಣ್ಣು ಇರಲಿಲ್ಲ.. ಅವಳ ಮಾತಲ್ಲಿ ಅದೆಷ್ಟು ಪ್ರೀತಿ ಕಾಳಜಿ ಅಕ್ಕರೆ ತುಂಬಿರುತಿತ್ತು.ಊಟ ಮಾಡುವುದು ಸ್ವಲ ತಡವಾದರೂ ಪ್ರೀತಿಯ ಗದರಿಕೆ ಇರುತ್ತಿತ್ತು..ಮಲಗುವುದು ತಡವಾದರೂ ಹಾಗೆ.. ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇಲ್ಲದಿದ್ರೆ ಯಾರು ಮಾಡ್ತಾರೆ ಮತ್ತೆ.. ಮಲ್ಗಿದ್ರೆ ಯಾರಾದ್ರೂ ಎಷ್ಟ್ ದಿನ ನೋಡ್ಕೋತಾರೆ.. ಹೀಗೆಲ್ಲ ಅವಳ ಯೋಚನೆ.. ಫೋನ್ ಶಬ್ಧವಾದ್ಗೆಲ್ಲ ಅವಳ ಮೆಸ್ಸೆಜೇನೊ ಎಂದು ನೋಡುತಿದ್ದ.. ಮತ್ತದೇ ನಿರಾಶೆ.ಕೆಲಸದಲ್ಲು ಗಮನವಿಡಲಾಗುತ್ತಿಲ್ಲ.ಒಟ್ಟಿನಲ್ಲಿ ಈಗ ಅವನಿಗೆ ಅವಳ ಇರವು ಎಷ್ಟು ಅಮೂಲ್ಯವೆಂದು ಅರಿವಾಗುತಿತ್ತು.
ಇವತ್ತಿಗೆ ೫ ದಿನವಾಗಿತ್ತು ಅಂಜಲಿಯೊಡನೆ ಮಾತಾಡದೆ.. ಯಾವುದೂ ಬೇಡ ಅಂಜಲಿಒಮ್ಮೆ ಮಾತಾಡಿದರೆ ಸಾಕೆನಿಸುವ ಸ್ಥಿತಿಗೆ ತಲುಪಿದ್ದ..ಅಂದು ಅವನ ಆತ್ಮೀಯ ಗೆಳೆಯ ರಾಮ್ ಅವನನ್ನು ನೋಡಲು ಬಂದ. ಸಾಮಾನ್ಯವಾಗಿ ವಾರಕ್ಕೊಮ್ಮೆ ಅವರಿಬ್ಬರ ಭೇಟಿ ಇರುತ್ತಿತ್ತು.ಗೆಳೆಯನನ್ನು ನೋಡಿದ ರಾಮ್ ದಿಗ್ಭ್ರಾಂತನಾದ..
"ಏನೋ ಇದೂ ನಿನ್ ಅವತಾರ?.. ಸುದ್ದಿನೆ ಇಲ್ಲ?.. ಅದ್ಕೆ ಬಂದೆ" .. ಅಂದ.. ಅಷ್ಟೇ ಸಾಕಾಯಿತು ರಾಜೀವನಿಗೆ.. ಗೆಳೆಯನ ಕೈ ಹಿಡಿದು ಸುಮ್ಮನೆ ತಲೆ ತಗ್ಗಿಸಿ ಕೂತ.. ಯಾವತ್ತೂ ಹೀಗೆ ಇರದ ಇವನಿಗೇನಾಯಿತು?? ತುಂಬಾ ಮ್ರುದು ಮನಸಿನ ಎಲ್ಲರನ್ನೂ ಪ್ರೀತಿಯಿಂದ ಕಾಣುವ.. ಇವನ ನಗುವೆಲ್ಲಿ?? ..
"ಏನಾಯ್ತು ಹೇಳಪ್ಪ ಮಾರಯಾ ಅಂತ ಮತ್ತೆ ಕೇಳಿದ.. ಇನ್ನು ಸುಮ್ಮನಿರುವುದು ಸರಿಯಲ್ಲೆಂದು ಎಲ್ಲವನ್ನೂ ಹೇಳಿಬಿಟ್ಟ ರಾಜೀವ.. ಅಶ್ಚ್ರರ್ಯ ದಿಂದ ಮೂಕನಾಗಿಬಿಟ್ಟ. ಅಂಜಲಿ ಅವನಿಗೂ ಸ್ನೇಹಿತೆ.ಆದರೆ ಅದು ಎಫ಼್ ಬಿ ನಲ್ಲಿ ಮಾತ್ರ.. ಅವಳ ಬಗ್ಗೆ ಏನು ತಿಳಿದಿರಲಿಲ್ಲ.ಆದರೇ ಅವಳ ಕಾಮೆಂಟ್ ಗಳಿಂದ ತುಂಬಾ ಡೀಸೆಂಟ್ ಹುಡುಗಿಯೆಂದು ಗೊತ್ತಾಗುತಿತ್ತು.
ಸರಿ ಈಗ ಏನು ಮಾಡುವುದು ಎಂದು ತಿಳಿಯಲಿಲ್ಲ. ಸರಿ ಅವಳ ಪರಿಚಯದವರು ಯಾರದರೂ ಗೊತ್ತಾ? ಎಂದು ರಾಜೀವನನ್ನು ಕೇಳಿದ ರಾಮ್..
ತುಂಬಾ ಯೋಚಿಸಿದ ನಂತ್ರ ಅವಳ ಕಸಿನ್ ಒಬ್ಬರು ಇವನಿಗೂ ಸ್ನೇಹಿತೆಯಾಗಿದ್ದರು .. .. ಸರಿ ಅವರ ಮೂಲಕ ಆವಳನ್ನು ತಲುಪುವ ಸಲಹೆ ಕೊಟ್ಟ..ಈಗ ಸ್ವಲ್ಪ ನಿರಾಳವಾದ ರಾಜೀವ ಸ್ನೇಹಿತನಿಗೊಂದು ಧನ್ಯವಾದ ಹೇಳಿದ ಖುಷಿಯಿಂದ.
ಸರಿ ಸಂಜೆ ಯಾರು ಇರದ ಕಾರಣ ಆಫ಼ೀಸಿನಿಂದಲೇ ಅಂಜಲಿಯ ಕಸಿನ್ ನನ್ನು ಆನ್ ಲೈನ್ ನಲ್ಲಿ ಮಾತನಾಡಿಸಲು ನಿರ್ಧರಿಸಿದ. ಅವರಿದ್ದಾರಾ ಅಂತ ನೋಡಿದ. ಅವನ ಪುಣ್ಯಕ್ಕೆ ಅವರು ಇದ್ದರು..ಉಭಯ ಕುಶಲೋಪರಿ ಮಾತಾಡಿ ಅವರ ಹತ್ತಿರ ಅಂಜಲಿ ಯಾಕೆ ಕಾಣಿಸ್ತಿಲ್ಲಾ ಅಂತ ಪೀಠಿಕೆ ಹಾಕಿದ.. ಇದ್ದಳಲ್ಲಾ.. ಅವರಂದರು.. ಮತ್ತೆ ಆನ್ ಲೈನ್ ಬರ್ತಿಲ್ಲಾ.. ಫೋನ್ ಗೂ ಸಿಗ್ತಿಲ್ಲಾ ಅಂದ.. ಇಲ್ಲವಲಾ ನಿನ್ನೆ ಎಲ್ಲಾ ಮಾತಾಡಿದೀನಿ.. ಅವರಂದರೂ.. ಈಗ ಅವನಿಗೇ ತಡೆಯಲಾಗದೇ.. ನೋಡಿ ಅಕ್ಕ ನನ್ ಮೇಲೆ ಕೋಪಿಸಿ ಕೊಂಡು ಮಾತಾಡ್ತಿಲ್ಲಾ ಅಂದ.. ನಾ ಹೇಳ್ತಿನಿ ಬಿಡು ಬೇಜಾರಾಗ್ಬೇಡ ಅಂದ್ರು.. ಸರಿ ಅಕ್ಕ ಅವಳಿಗೆ ಹೇಳಿ ನಾ ಕಾಯ್ತಾ ಇದೀನಿ ಅಂತ.. ಪ್ಲೀಸ್ ಅಕ್ಕ ಈಗ್ಲೇ ಮಾಡೋಕೆ ಹೇಳಿ ಅಂದ.. ಆಗ ಸಮಯ ೭ ಘಂಟೆ.. ೭ ೩೦ .. ೮.. ೯ ಆದರೂ ಅಂಜಲಿಯಿಂದ ಫೋನ್ ಬರಲಿಲ್ಲ.. ನಿರಾಶೆಯ ತುತ್ತತುದಿಗೇರಿದ್ದ ರಾಜೀವ್ ಇನ್ನು ಅಂಜಲಿಯನ್ನು ಕಳೆದುಕೊಂಡೆ ಎಂದು ಪಶ್ಚಾತ್ತಾಪ ಪಡತೊಡಗಿದ.. ಭಾರವಾದ ಮನಸ್ಸಿಂದ ಮನೆಗೆ ಹೊರಡೋಣವೆಂದು ಏಳುತ್ತಿರುವಾಗ ಫೋನ್ ಸದ್ದು ಮಾಡಿತ್ತು.. ಅವಳದ್ದಂತೂ ಆಗಿರಲಾರದು ಎಂದು ಡಿಸ್ಪ್ಲೇ ನೋಡಿದವನಿಗೆ ಹುರ್ರೇ ಎಂದು ಕಿರಿಚುವಂತಾಯಿತು.. ಅಂಜಲಿ.. ಬೇಗ ರಿಸೀವ್ ಮಾಡಿ ಹಲೋ ಅಂದ.. ಅತ ಕಡೆಯಿಂದ ಯಾವುದೇ ಸದ್ದಿಲ್ಲ.. ಮತ್ತೆ ಅಂಜಲೀ ಎಂದ.. ಆಗ ಆಳದಿಂದ ಕೇಳಿ ಬಂತು.. ಹಲೋ.. ಈಗ ರಾಜೀವನದು ನಿಲ್ಲದ ಮಾತಿನ ಓಟ... ಯಾಕೆ ಹೀಗೆ ಮಾಡಿದೆ ಅಂಜಲಿ.. ಮನಸಾದರೂಹೇಗೆ ಬಂತು ನಿನಗೇ... ಮೆಸ್ಸೇಜು ಕಾಲ್ ಯಾವ್ದು ಇಲ್ದೇ ಹೇಗೆ ಅಂಜಲಿ?... ಮಾತಾಡೂ ಅಂಜಲಿ .. ಹೀಗೇ ೫ ದಿನಗಳಲ್ಲಿ ಪಟ್ಟ ಕಷ್ಟವೆಲ್ಲಾ ಒಂದೇ ಸಲ ಮರೆತವನಂತೆ ಮಾತಾಡುತ್ತಲೇ ಅವಳನ್ನೂ ಕೇಳುತ್ತಲೇ ಹೋದ.. ಆ ಕಡೆಯಿಂದ ಒಂದೇ ಒಂದು ಶಬ್ಧ ಕೂಡ ಬರಲಿಲ್ಲ. .. ಅವನಿಗೆ ಗಾಬರಿ ಯಾಯಿತು.. ಕಾಲ್ ಕಟ್ ಅಯೀತ?
ಅಂಜಲೀನ.. ಅಂಜಲೀ. ... ಮಾತಾಡು ಅಂಜಲೀ.. ಈಗ ಆ ಕಡೆಯಿಂದ ಮುದ್ದಾದ ಸ್ವರ ಕೇಳತೊಡಗಿತು..
ರಾಜೀವ್ ನಾ ಎಲ್ಲಿ ಹೋಗ್ಲಿ ನಿಮ್ಮನ್ನು ಬಿಟ್ಟು.. ? ನೋಡಿದಿರ ಕೇವಲ ೫ ದಿನಕ್ಕೇ ನಿಮಗೆ ಈ ಸ್ಥಿತಿ.. ಈಗ ಹೇಳಿ ನೀವು ಪ್ರೀತಿ ಇಂದ ಮಾತಾಡುವ ಕಾಳಜಿ ಮಾಡುವ.. ಅವರ ಚಿತ್ರಗಳಿಗೆ ಇಂಪ್ರೆಸ್ಸ್ ಆಗೋ ಹಾಗೆ ಕಾಮೆಂಟ್ ಹಾಕುವ .. ಗೆಳತಿ.. ಹಾಗೆ ಹೀಗೆ ಅಂತೆಲ್ಲ ಹೇಳುವ.. ಮೆಸ್ಸೆಜ್ ಗಳಲ್ಲಿ ಅವರ ಆಸೆಗಳನ್ನು ತೀರಿಸುವ ನಿಮ್ಮ ಗೆಳತಿಯರೂ ಒಂದು ದಿನ ನಿಮ್ಮ ಬಗ್ಗೆ ಹೀಗೇ ಆದ್ರೆ ನಿಮ್ಮ ಕಥೆ ಏನು ಅನ್ನೋದನ್ನ ಯೋಚಿಸಿದ್ದೀರ ರಾಜೀವ್.. ಅದು ಒಬ್ಬಿಬ್ಬರೇ.. ಅವರ ಎಲ್ಲಾ ಆಸೆಗಳು ನೀವೇ ನಿಮ್ಮಂಥ ಒಬ್ಬ ಗಂಡ ತನಗಿದ್ದರೇ ಎಷ್ಟೋ ಚೆನ್ನಾಗಿರತ್ತೆ .. ಅಂತ ಅಂದುಕೊಳ್ಲೋ.. ಹಾಗೆ ನಿಮ್ಮನ್ನು ಮನಸಲ್ಲಿ ಪ್ರೀತ್ಸೊ ಜೀವಗಳು ಎಷ್ಟಿರಬಹುದೋ ಅನ್ನೋದನ್ನಾ ಒಂದು ದಿನಾ ನಾದ್ರು ಯೋಚಿಸಿದ್ರಾ.. ನೀವು ಎಲ್ಲರ ಬಗ್ಗೆಯೂ ಹೀಗೆ ನಡ್ಕೋತಿದ್ರಿ ಅನ್ನೋದು ಗೊತ್ತಾದಾಗ ಅವ್ರ ಮನಸ್ಥಿತಿ ಏನಾಗಬಹುದು ?? ಹೇಳಿ ರಾಜೀವ?..
ರಾಜೀವನಿಗೆ ಬಲವಾಗಿ ಯಾರೋ ಕೆನ್ನೆಗೆ ಬಾರಿಸಿದಂತಾಯ್ತು.. ನಿಜ ಇದನ್ನೇಲ್ಲಾ ಯೋಚಿಸಿರಲೇ ಇಲ್ಲ.. ಪ್ರೀತಿ ಹಂಚುತ್ತಿದ್ದೇನೆ ಅಂದುಕೊಂಡಿದ್ದೆ.. ಆದ್ರೆ ಪ್ರೀತಿ ಹಂಚುವ ನೆಪದಲ್ಲಿ ಅವ್ರ ಮನಸ್ಸನ್ನು ಆವರಿಸಿಕೊಂಡಿರುತ್ತೇನೆ ಅಂತಾ ಅಂದುಕೊಂಡಿರಲಿಲ್ಲಾ..
ಅಂಜೂ ನನ್ನ ಕ್ಷಮಿಸಿಬಿಡು ಬಂಗಾರಿ..ನನ್ನಲ್ಲಿ ಯಾವ ದುರುದ್ದೇಶವೂ ಇಲ್ಲ.. ನಾನು ಯಾರಿಗೂ ನೋವು ಕೊಡಬಾರ್ದು.. ಎಲ್ರೂ ಖುಶಿಯಾಗಿರ್ಲಿ ಅನ್ನೋ ಉದ್ದೇಶವಷ್ಟೇ.. ಆದ್ರೆ ಇದೆಲ್ಲ ಯೊಚಿಸಿರಲಿಲ್ಲಾ.. ಇನ್ನು ಮುಂದೆ ಹುಷಾರಾಗಿ ನಡ್ಕೋತೀನಿ ಅಂಜೂ.. ಅತ್ತ ಕಡೆ ಅಂಜುವಿನಲ್ಲಿ ಏನೋ ಹೇಳಲಾಗದ ಭಾವವಾದರೆ ಇತ್ತ ರಾಜೀವ ಒಂದು ನಿರ್ಧಾರಕ್ಕೆ ಬಂದವನಂತೆ .... ಅಂಜೂ ನಿಂಗೇನೋ ಹೇಳಬೇಕು.. ಅಂದ..
ಹೇಳು..
ಅಂಜೂ ನಾ ಹೇಳೋದನ್ನ ಕೇಳಿ ನಿಂಗೆ ಏನನ್ಸತ್ತೆ ಅನ್ನೋದು ಅಂತ ನಂಗೆ ಗೊತ್ತಿಲ್ಲಾ. ಆದ್ರೇ ಹೇಳದೇ ಇನ್ನು ಸುಮ್ಮನಿರಲು ನನ್ನಿಂದ ಆಗ್ತಿಲ್ಲ ಅಂಜೂ..ನಾನು ನಿನ್ನ ಪ್ರೀತ್ಸೋಕೆ ಶುರುಮಾಡಿದಿನಿ ಅನ್ಸತ್ತೇ..ನೀ ಇಲ್ದೇ ಇರೋಕಾಗಲ್ಲ ಅಂಜೂ.. ಹೇಳು ಅಂಜೂ.. ನಿಂಗಿಷ್ಟ ಇಲ್ಲ ಅಂದ್ರೆ ಒತ್ತಾಯ ಇಲ್ಲ.. ಆದ್ರೇ ದೂರ ಆಗ್ಬೇಡ.ಹೇಳು ಅಂಜೂ.....
ಆ ಕಡೆಯಿಂದ ಅಳುವ ಸಣ್ಣ ಸದ್ದಾ?? ರಾಜೀವನಿಗೆ ಗಾಬರೀ.. ಅಂಜೂ ಇಷ್ಟ ಇಲ್ಲದಿದ್ರೆ ಬೇಡ.. ಆದ್ರೆ ಅಳ್ಬೇಡ ದಯವಿಟ್ಟು..
ಆ ಕಡೆಯಿಂದ ಮೆಲ್ಲನೇ.. ಐ ಲವ್ ಯೂ ರಾಜೀವಾ.. ನಿನ್ನ ಬಿಟ್ಟಿರೋಕೆ ನಂಗೂ ಆಗೋಲ್ಲ ಕಣೋ.. ಪಿಸು ನುಡಿದಳು ಅಂಜಲಿ..
ಅಂಜೂ ಇನ್ಮುಂದೇ ನಿನ್ನೊಬ್ಳನ್ನೇ ಪ್ರೀತ್ಸೋದು ಖುಷಿ ಪಡ್ಸೋದು ನನ್ ಕೆಲ್ಸ ಬಂಗಾರು.. ಅಂತ ಮನಸಲ್ಲೆ ಅಂದುಕೊಂಡ ರಾಜೀವ.. ಎರಡು ಜೀವಗಳು ಪುಳಕದಲ್ಲಿ ತೇಲಿಹೋಗುತ್ತಿದ್ದವು....