ಪತಿದೇವರನ್ನ ಕಳಿಸಿ ಬಾಗಿಲು ಹಾಕಿಕೊಂಡು ಬಂದವಳು ಒಂದು ಗಳಿಗೆ ಸುಧಾರಿಸಿಕೊಳ್ಳೋಣ ಅಂತ ಅನ್ಸಿ ಹಾಲ್‌ನ ಸೋಫಾದಲ್ಲಿ ಕುಳಿತು ಕಣ್ಣುಮುಚ್ಚಿದವಳಿಗೆ ಹಳೆಯ ನೆನಪೊಂದು ನೆನಪಿನ ಬುತ್ತಿಯಿಂದ ಬಿಚ್ಚಿಕೊಂಡು ಕಚಗುಳಿ ಇಡಲಾರಂಭಿಸಿತು. ಆಗ ನನಗೆ ೧೭ರ ಪ್ರಾಯ, ತಂದೆ ಇಲ್ಲದ, ತಾಯಿಯ ಆಸರೆಯಲ್ಲಿ ಮುದ್ದಾಗಿ, ಅಷ್ಟೇ ಕಟ್ಟುನಿಟ್ಟಾಗಿ ಬೆಳೆದ ಹುಡುಗಿ ನಾನು. ದ್ವೀತಿಯ ಪಿಯುಸಿಯಲ್ಲಿ ಓದುತಿದ್ದ ಕಾಲವದು, ಗೆಳತಿಯರು ಇದ್ದರೂ ಇಲ್ಲದಂತಹ ಭಾವ ಬೆಳೆಸಿಕೊಂಡು ಒಂಟಿತನವನ್ನು ಇಷ್ಟಪಡುತ್ತಿದ್
ದ ನನಗೆ, ನನ್ನದೇ ಭಾವನಾಲೋಕದಲ್ಲಿ ತೇಲಲು ಇಷ್ಟಪಡುತ್ತಿದ್ದ ದಿನಗಳವು....
ಅದ್ಯಾಕೋ ಗೆಳೆತಿಯರು ಬೇಡವೆಂದು ಅನಿಸುತಿತ್ತು. ಆ ದಿನಗಳಲ್ಲಿ ಬೆಂಗಳೂರಿನಲ್ಲಿ ಬಸ್ಸುಗಳ ಸಂಖ್ಯೆ ಕಡಿಮೆ ಇತ್ತು. ಕಾಲೇಜಿಗೆ ಹೋಗುವಾಗ ಬರುವಾಗ ತಾಸುಗಟ್ಟಲೆ ಕಾಯಬೇಕಿತ್ತು. ಆದರು ಸೊಗಸಾದ ದಿನಗಳವು. ಕಾಲದ ದಿನಚರಿಯಲ್ಲಿ ಕಾಲ ಕಳೆದುಹೋಗುವುದು ಗೊತ್ತಾಗುತ್ತಿರಲಿಲ್ಲ. ಆಗಾಗ ನಾನು ಅಮ್ಮನ ಯಾವುದೊ ಕೆಲಸಕೊಸ್ಕರ ಸಜ್ಜನರಾವ್ ಸರ್ಕಲ್‌ಗೆ ಹೋಗಿಬರಬೇಕಾಗುತಿತ್ತು. ಕಾಲೇಜು ಮಧ್ಯಾಹ್ನ ಒಂದು ಗಂಟೆಗೆಲ್ಲ ಮುಗಿದುಹೋಗುತ್ತಿದ್ದರಿಂದ ಹಾಗೆ ನೇರವಾಗಿ ಹೋಗಿಬಿಡುತ್ತಿದ್ದೆ. ಬರುವಾಗ ಕೃಷ್ಣರಾವ್ ಪಾರ್ಕ್‌ನ ಹತ್ತಿರವಿರುವ ಸ್ಟಾಪ್‌ಗೆ ಬಂದು ಬಸ್ ಹತ್ತಬೇಕಿತ್ತು. ಆಗ ಈಗಿನಂತೆ ಮರಗಳಿಲ್ಲದ ರಸ್ತೆಯಂತಿರದೇ, ರಸ್ತೆಯ ಇಕ್ಕೆಲಗಳಲ್ಲಿಯೂ ಮರಗಳಿದ್ದವು, ಹಾಗಾಗಿ ತಂಪಾದ ನೆರಳಿರುತಿತ್ತು, ಆಗ ಮಧ್ಯಾಹ್ನ ೨ ರ ಸಮಯ ಬಿಸಿಲು ಬಹಳ ಇತ್ತು. ನೆರಳಲ್ಲಿ ನಿಂತು ಬಸ್ ಗೆ ಕಾಯುತ್ತಿದ್ದೆ. ರಸ್ತೆ ಆ ಕಡೆ ದೊಡ್ಡ ಮರವಿತ್ತು. ಅವತ್ತು ಇದ್ದಕಿದ್ದ ಹಾಗೆ ಒಬ್ಬ ಚಿಗುರು ಮೀಸೆಯ ಅಂದದ ಹುಡುಗನೊಬ್ಬ ಅಲ್ಲಿ ನಿಂತು ನನ್ನನು ಒಂದೇ ಸಮನೇ ದಿಟ್ಟಿಸುತ್ತಿದ್ದ, ಆದರೆ ನನ್ನ ಮನಸ್ಸು ಅದನ್ನು ಗಮನಿಸಿದ್ದರೂ ಗಮನಿಸದಂತೆ ಸುಮ್ಮನಿರುವಂತೆ ಪ್ರಚೋದಿಸಿತ್ತು. ಅದ್ಯಾಕೋ ಗೊತ್ತಿಲ್ಲ ಆತ ನನ್ನತ್ತ ನೋಡುವುದನ್ನು ನಿಲ್ಲಿಸಲಿಲ್ಲ, ಹೆಚ್ಚು ಕಡಿಮೆ ಬಸ್ ಬರುವ ತನಕವೂ ಅವನು ನನ್ನತ್ತಲೇ ನೋಡುತ್ತಿದ್ದ, ನನಗೂ ಕಾಳಜಿ ಹೆಚ್ಚಾಯಿತು, ನನ್ನ ಕಣ್ಣುಗಳು ಸಹ ಅವನ ನೋಟವನ್ನು ಹಿಂಬಾಲಿಸುತ್ತಿದ್ದವು. ಆದರೆ ಯಾಕೋ ಹೆಚ್ಚು ತಲೆಕೆಡಿಸಿಕೊಳ್ಳಬಾರದು ಎಂದು ಸುಮ್ಮನಾದೆ. ಆತ ಯಾರೋ, ಏನೋ ಎಂದುಕೊಂಡು ಸುಮ್ಮನಾದೆ.
ಆದರೆ ಅದು ಇಷ್ಟಕ್ಕೆ ನಿಲ್ಲಲಿಲ್ಲ ನಾನು ಆಗಾಗ ಅದೇ ಬಸ್ ಸ್ಟಾಪ್‌ಗೆ ಅದೇ ಸಮಯಕ್ಕೆ ಬಸ್‌ಗಾಗಿ ಕಾಯುವುದು, ಹಾಗೆ ಬಸ್‌ಗಾಗಿ ಕಾಯುವ ಸಮಯದಲ್ಲೆಲ್ಲ ಆತ ಅದೇ ಮರದ ಕೆಳಗೆ ಪ್ರತ್ಯಕ್ಷವಾಗುವುದು ನಿರಂತರವಾಗಿಬಿಟ್ಟಿತ್ತು. ನಾನು ಬಸ್ ಹತ್ತುವ ತನಕವೂ ಹಾಗೆ ನನ್ನ ನೋಡುತ್ತಾ ನಿಂತಿರುತ್ತಿದ್ದ, ಆದರೆ ನನಗೆ ಏನೋ ಮುಜುಗರ, ಮರದ ಮರೆಯಲ್ಲಿ ನಿಲ್ಲಲು ಆತ ಪ್ರಯತ್ನಿಸಿದ್ದು ಇತ್ತು ಆದರು ಅವನ ನೋಟದಲ್ಲಿ ಸೆಳೆತವೋ, ಆಕರ್ಷಣೆಯೋ, ತಿಳಿಯದಾಗಿತ್ತು ನಾನು ಕೂಡ ಆತನ ನೋಟಕ್ಕೆ ಮನಸ್ಸು ವಾಲುತ್ತಿರುವುದರ ಗಮನಕ್ಕೆ ಬಂದರೂ ಗಮನಕ್ಕೆ ಬಾರದಂತೆ ನಟಿಸುತ್ತಿದ್ದೆ. ನಾನು ಒಮ್ಮೊಮ್ಮೆ ವಾರೆ ನೋಟದಲ್ಲಿ ನೋಡುತಿದ್ದೆ, ಅಲ್ಲಿ ಒಂದು ತುಂಟ ನಗು ಯಾವಾಗಲು ಇರುತ್ತಿತ್ತು. ಹೀಗೆ ಆಗಾಗ ಕಣ್ಣಾಮುಚ್ಚಲೆ ಆಟವೇ ಹೊರತು ಒಂದು ದಿನಕ್ಕೂ ಮಾತಾಡಲಿಲ್ಲ್ಲ. ಬರಿ ನೋಟಗಳ ವಿನಿಮಯಕ್ಕೆ ಮಾತ್ರ ಸೀಮಿತವಾಯಿತು. ಹಾಗೆ ಒಂದು ದಿನ ನಾನು ಸ್ಟಾಪ್ ಗೆ ಬಂದಾಗ ಮಾಮೂಲಿನಂತೆ ನನ್ನ ನೋಟ ಎದರು ಮರದ ಬಳಿ ಹೋಯ್ತು, ಆದರೆ ಅಂದು ಅವನಿರಲಿಲ್ಲ, ಒಂದು ಕ್ಷಣ ನನ್ನೆದೆ ಬಡಿತ ನಿಂತುಹೋಯ್ತು, ಆತನಿಗಾಗಿ ಮನ, ಮರದ ಸುತ್ತಮುತ್ತ ಕಣ್ಣಾಡಿಸುತ್ತಾ ಇದ್ದವು, ಆತ ಕಾಣದಿದ್ದಕ್ಕೆ ಮನದಲ್ಲಿ ಏನೋ ತಳಮಳ. ನಿಂತಲ್ಲೇ ನನ್ನ ಕಣ್ಣುಗಳು ಸುತ್ತಲೂ ಹುಡುಕಾಡತೊಡಗಿದವು. ಆತ ಮಾತ್ರ ಎಲ್ಲ್ಲೂ ಕಾಣಿಸಲಿಲ್ಲ. ಮನಸ್ಸು ಮುದುಡಿಹೋಯ್ತು. ಕಣ್ಣಲ್ಲಿ ನೀರು ತುಂಬಿತು. ಮನದಲ್ಲಿ ಏನು ಕಳೆದುಕೊಂಡ ಭಾವ, ಏನು ಮಾಡಬೇಕೆಂದೇ ತಿಳಿಯಲಿಲ್ಲ. ಅಷ್ಟಕ್ಕೂ ಅವನು ಯಾರೋ ಏನೋ ಅವನು ಬರದಿದ್ದರೆ ನನ್ನ ಮನಸ್ಸಿಗೆ ಏನಾಗಬೇಕು ಎಂಬುದು ಮನಸ್ಸಿನ ಒಂದು ಭಾವವೇರ್ಪಟ್ಟರೂ, ಮತ್ತೊಂದು ಕಡೆ ಏನೋ ಒಂದು ರೀತಿಯ ಹೇಳಲಾಗದ ಚಡಪಡಿಕೆ ನಿಲ್ಲಲೇ ಇಲ್ಲ ೧೦ ನಿಮಿಷ. ಹಾಗೆಯೆ ಪರಿವೇ ಇಲ್ಲದೆ ನಿಂತಿರಬೇಕಾದರೆ, ಆತ ಅಚಾನಕ್ಕಾಗಿ ಮರದ ಮರೆಯಿಂದ ಪ್ರತ್ಯಕ್ಷವಾದ, ಆತನ ಮನದಲ್ಲಿ, ನೋಡದೆಯ ಹೇಗೆ ಕಾಡಿಸಬಲ್ಲೆ ನಿನ್ನ ಎಂಬ ಭಾವವಿತ್ತು!!?? ಆತನ ನೋಟದಲ್ಲಿ ತುಂಟ ನಗುವಿತ್ತು! ಆದರೆ ಅದೇ ಕೊನೆ ಎಂದೂ ನಿಶ್ಚಯವಾಗಿತ್ತೋ ಏನೋ ಆತ ಮತ್ತೆಂದೂ ಸಿಗದ ಹಾಗೆ ನನ್ನ ಬದುಕಲ್ಲಿ ಊಹಿಸಲಾಗದಂತೆ ವೇಗವಾಗಿ ಬದಲಾವಣೆಗಳು ನಡೆದವು. ದ್ವಿತೀಯ ಪಿಯುಸಿಯ ಫಲಿತಾಂಶ ಬರುವ ಮೊದಲೇ ನನ್ನ ಮದುವೆ ನಿಶ್ಚಯವಾಯಿತು.
ಆ ನಂತರ ಬೆಂಗಳೂರು ಬಿಡಬೇಕಾಯಿತು. ಮತ್ತೆಂದೂ ಆ ಬಸ್ ಸ್ಟಾಪ್ ಬಳಿಗೆ ಹೋಗಲಾಗಲೇ ಇಲ್ಲ. ಅವನ ನೆನಪು ಕಾಡುತ್ತಿದ್ದರು ಯಾರಿಗೂ ಹೇಳಲಾಗದೇ ಮನದ ಮೂಲೆಯಲ್ಲಿ ಹಾಸಿಗೆ ಹಾಸಿ ಮಲಗಿಬಿಟ್ಟಿದ್ದವು. ಕೊನೆಗೂ ನನಗೆ ಅದು ಪ್ರೀತಿಯೋ, ಪ್ರೇಮವೋ ತಿಳಿಯಲೇ ಇಲ್ಲ. ಬರಿ ನೋಟಗಳ ವಿನಿಮಯಕ್ಕೆ ಮಾತ್ರ ಸಿಮೀತವಾಗಿ ಮುಗಿದಿತ್ತು ನಮ್ಮ ಭೇಟಿ. ಆದರೂ ಆತನನ್ನು ಬಿಟ್ಟಿರಲಾರೆ ಎಂಬ ಭಾವ ಯಾವತ್ತು ಕಾಡಲಿಲ್ಲ. ನೆನಪು ಮಾತ್ರ ಗಾಢವಾಗಿತ್ತು, ಮುಂದೆ ಮದುವೆ, ಮಕ್ಕಳು ಎಂದು ಸಂಸಾರ ಜಂಜಾಟದಲ್ಲಿ ಮುಳುಗಿದರೂ ಆಗಾಗ ಅ ಘಟನೆ ನೆನಪಾಗಿ ತುಟಿಯಲ್ಲಿ ನಗು ತೇಲುತ್ತದೆ. ಒಂದು ಮಧುರಭಾವ ಹಾಗೆ ಉಳಿದಿದೆ, ಆದರೆ ಅವನ ಮೊಗ ಮಸುಕಾಗಿದೆ ಅಷ್ಟೆ, ನನೆಪುಗಳು ಮಾತ್ರ ಹಚ್ಚಹಸಿರಾಗಿವೆ. ಈಗ ಅವನಿಗೂ ಮದುವೆ ಮಕ್ಕಳು ಆಗಿರಬಹುದೇನೋ? ನನ್ನಂತೆ ಅವನಿಗೂ ನನ್ನ ನೆನಪಿಂದ ನಗು ಬರುತ್ತಿರಬಹುದೇನೋ? ಎಂದು ಆಗಾಗ ಅನಿಸುವುದುಂಟು.ಅದು ನನ್ನ ಅನಿಸಿಕೆ ಮಾತ್ರ, ಆತನಲ್ಲಿ ಏನಿತ್ತೋ ಏನೋ ಒಂದು ಗೊತ್ತಿಲ್ಲ ಆತನಿಗೆ ನೋಟವಲ್ಲದೆ i love u ಎಂದು ಒಬ್ಬರಿಗೊಬ್ಬರು ಹೇಳಿಕೊಂಡಿದ್ದಿದ್ದರೆ ಈಗ ಜೀವನ ಹೇಗಿರುತ್ತಿತ್ತೋ ತಿಳಿಯದು, ಆದರೆ ಹಾಗೆ ಹೇಳದಿರುವುದೇ ಒಳ್ಳೆಯದಾಯಿತೆಂದು ಈಗ ಅನಿಸುತ್ತಿದೆ ನನಗೆ ಒಂದು ಮಧುರಭಾವ ಹಾಗೆ ಉಳಿದಿದೆ. ನೆನಪುಗಳು ಆಗಾಗ ಮನದ ಮೂಲೆಯಿಂದ ಬಂದು ಕಾಡುವುದಿದೆಯಲ್ಲಾ ಅದರಲ್ಲಿರುವ ಮಧುರವಾದ ಭಾವ ಇಲ್ಲವಾಗಿರುತ್ತಿತ್ತೇನೋ.
ಕರೆಗಂಟೆಯ ಸದ್ದು ಯಾರೋ ಬಂದರೆಂದು ಕೂಗಿ ಹೇಳಿದಾಗ ನೆನಪಿಂದ ಹೊರಬಂದೆ..ಈಗ ಬರೆಯಬೇಕೆನಿಸಿತು ಬರೆದಿದ್ದೇನೆ ..ಓದಿ ನಿಮಗೆನನಿಸುತ್ತಿದೆಯೋ ನನಗೆ ತಿಳಿಯದು...ನನಗೆ ನಿರಾಳವೆನಿಸಿದೆ...
sunita hegde