Thursday, October 24, 2013

ಮಿಂಚಿ ಮರೆಯಾದವ


ಪತಿದೇವರನ್ನ ಕಳಿಸಿ ಬಾಗಿಲು ಹಾಕಿಕೊಂಡು ಬಂದವಳು ಒಂದು ಗಳಿಗೆ ಸುಧಾರಿಸಿಕೊಳ್ಳೋಣ ಅಂತ ಅನ್ಸಿ ಹಾಲ್‌ನ ಸೋಫಾದಲ್ಲಿ ಕುಳಿತು ಕಣ್ಣುಮುಚ್ಚಿದವಳಿಗೆ ಹಳೆಯ ನೆನಪೊಂದು ನೆನಪಿನ ಬುತ್ತಿಯಿಂದ ಬಿಚ್ಚಿಕೊಂಡು ಕಚಗುಳಿ ಇಡಲಾರಂಭಿಸಿತು. ಆಗ ನನಗೆ ೧೭ರ ಪ್ರಾಯ, ತಂದೆ ಇಲ್ಲದ, ತಾಯಿಯ ಆಸರೆಯಲ್ಲಿ ಮುದ್ದಾಗಿ, ಅಷ್ಟೇ ಕಟ್ಟುನಿಟ್ಟಾಗಿ ಬೆಳೆದ ಹುಡುಗಿ ನಾನು. ದ್ವೀತಿಯ ಪಿಯುಸಿಯಲ್ಲಿ ಓದುತಿದ್ದ ಕಾಲವದು, ಗೆಳತಿಯರು ಇದ್ದರೂ ಇಲ್ಲದಂತಹ ಭಾವ ಬೆಳೆಸಿಕೊಂಡು ಒಂಟಿತನವನ್ನು ಇಷ್ಟಪಡುತ್ತಿದ್
 ದ ನನಗೆ, ನನ್ನದೇ ಭಾವನಾಲೋಕದಲ್ಲಿ ತೇಲಲು ಇಷ್ಟಪಡುತ್ತಿದ್ದ ದಿನಗಳವು....

ಅದ್ಯಾಕೋ ಗೆಳೆತಿಯರು ಬೇಡವೆಂದು ಅನಿಸುತಿತ್ತು. ಆ ದಿನಗಳಲ್ಲಿ ಬೆಂಗಳೂರಿನಲ್ಲಿ ಬಸ್ಸುಗಳ ಸಂಖ್ಯೆ ಕಡಿಮೆ ಇತ್ತು. ಕಾಲೇಜಿಗೆ ಹೋಗುವಾಗ ಬರುವಾಗ ತಾಸುಗಟ್ಟಲೆ ಕಾಯಬೇಕಿತ್ತು. ಆದರು ಸೊಗಸಾದ ದಿನಗಳವು. ಕಾಲದ ದಿನಚರಿಯಲ್ಲಿ ಕಾಲ ಕಳೆದುಹೋಗುವುದು ಗೊತ್ತಾಗುತ್ತಿರಲಿಲ್ಲ. ಆಗಾಗ ನಾನು ಅಮ್ಮನ ಯಾವುದೊ ಕೆಲಸಕೊಸ್ಕರ ಸಜ್ಜನರಾವ್ ಸರ್ಕಲ್‌ಗೆ ಹೋಗಿಬರಬೇಕಾಗುತಿತ್ತು. ಕಾಲೇಜು ಮಧ್ಯಾಹ್ನ ಒಂದು ಗಂಟೆಗೆಲ್ಲ ಮುಗಿದುಹೋಗುತ್ತಿದ್ದರಿಂದ ಹಾಗೆ ನೇರವಾಗಿ ಹೋಗಿಬಿಡುತ್ತಿದ್ದೆ. ಬರುವಾಗ ಕೃಷ್ಣರಾವ್ ಪಾರ್ಕ್‌ನ ಹತ್ತಿರವಿರುವ ಸ್ಟಾಪ್‌ಗೆ ಬಂದು ಬಸ್ ಹತ್ತಬೇಕಿತ್ತು. ಆಗ ಈಗಿನಂತೆ ಮರಗಳಿಲ್ಲದ ರಸ್ತೆಯಂತಿರದೇ, ರಸ್ತೆಯ ಇಕ್ಕೆಲಗಳಲ್ಲಿಯೂ ಮರಗಳಿದ್ದವು, ಹಾಗಾಗಿ ತಂಪಾದ ನೆರಳಿರುತಿತ್ತು, ಆಗ ಮಧ್ಯಾಹ್ನ ೨ ರ ಸಮಯ ಬಿಸಿಲು ಬಹಳ ಇತ್ತು. ನೆರಳಲ್ಲಿ ನಿಂತು ಬಸ್ ಗೆ ಕಾಯುತ್ತಿದ್ದೆ. ರಸ್ತೆ ಆ ಕಡೆ ದೊಡ್ಡ ಮರವಿತ್ತು. ಅವತ್ತು ಇದ್ದಕಿದ್ದ ಹಾಗೆ ಒಬ್ಬ ಚಿಗುರು ಮೀಸೆಯ ಅಂದದ ಹುಡುಗನೊಬ್ಬ ಅಲ್ಲಿ ನಿಂತು ನನ್ನನು ಒಂದೇ ಸಮನೇ ದಿಟ್ಟಿಸುತ್ತಿದ್ದ, ಆದರೆ ನನ್ನ ಮನಸ್ಸು ಅದನ್ನು ಗಮನಿಸಿದ್ದರೂ ಗಮನಿಸದಂತೆ ಸುಮ್ಮನಿರುವಂತೆ ಪ್ರಚೋದಿಸಿತ್ತು. ಅದ್ಯಾಕೋ ಗೊತ್ತಿಲ್ಲ ಆತ ನನ್ನತ್ತ ನೋಡುವುದನ್ನು ನಿಲ್ಲಿಸಲಿಲ್ಲ, ಹೆಚ್ಚು ಕಡಿಮೆ ಬಸ್ ಬರುವ ತನಕವೂ ಅವನು ನನ್ನತ್ತಲೇ ನೋಡುತ್ತಿದ್ದ, ನನಗೂ ಕಾಳಜಿ ಹೆಚ್ಚಾಯಿತು, ನನ್ನ ಕಣ್ಣುಗಳು ಸಹ ಅವನ ನೋಟವನ್ನು ಹಿಂಬಾಲಿಸುತ್ತಿದ್ದವು. ಆದರೆ ಯಾಕೋ ಹೆಚ್ಚು ತಲೆಕೆಡಿಸಿಕೊಳ್ಳಬಾರದು ಎಂದು ಸುಮ್ಮನಾದೆ. ಆತ ಯಾರೋ, ಏನೋ ಎಂದುಕೊಂಡು ಸುಮ್ಮನಾದೆ.

ಆದರೆ ಅದು ಇಷ್ಟಕ್ಕೆ ನಿಲ್ಲಲಿಲ್ಲ ನಾನು ಆಗಾಗ ಅದೇ ಬಸ್ ಸ್ಟಾಪ್‌ಗೆ ಅದೇ ಸಮಯಕ್ಕೆ ಬಸ್‌ಗಾಗಿ ಕಾಯುವುದು, ಹಾಗೆ ಬಸ್‌ಗಾಗಿ ಕಾಯುವ ಸಮಯದಲ್ಲೆಲ್ಲ ಆತ ಅದೇ ಮರದ ಕೆಳಗೆ ಪ್ರತ್ಯಕ್ಷವಾಗುವುದು ನಿರಂತರವಾಗಿಬಿಟ್ಟಿತ್ತು. ನಾನು ಬಸ್ ಹತ್ತುವ ತನಕವೂ ಹಾಗೆ ನನ್ನ ನೋಡುತ್ತಾ ನಿಂತಿರುತ್ತಿದ್ದ, ಆದರೆ ನನಗೆ ಏನೋ ಮುಜುಗರ, ಮರದ ಮರೆಯಲ್ಲಿ ನಿಲ್ಲಲು ಆತ ಪ್ರಯತ್ನಿಸಿದ್ದು ಇತ್ತು ಆದರು ಅವನ ನೋಟದಲ್ಲಿ ಸೆಳೆತವೋ, ಆಕರ್ಷಣೆಯೋ, ತಿಳಿಯದಾಗಿತ್ತು ನಾನು ಕೂಡ ಆತನ ನೋಟಕ್ಕೆ ಮನಸ್ಸು ವಾಲುತ್ತಿರುವುದರ ಗಮನಕ್ಕೆ ಬಂದರೂ ಗಮನಕ್ಕೆ ಬಾರದಂತೆ ನಟಿಸುತ್ತಿದ್ದೆ. ನಾನು ಒಮ್ಮೊಮ್ಮೆ ವಾರೆ ನೋಟದಲ್ಲಿ ನೋಡುತಿದ್ದೆ, ಅಲ್ಲಿ ಒಂದು ತುಂಟ ನಗು ಯಾವಾಗಲು ಇರುತ್ತಿತ್ತು. ಹೀಗೆ ಆಗಾಗ ಕಣ್ಣಾಮುಚ್ಚಲೆ ಆಟವೇ ಹೊರತು ಒಂದು ದಿನಕ್ಕೂ ಮಾತಾಡಲಿಲ್ಲ್ಲ. ಬರಿ ನೋಟಗಳ ವಿನಿಮಯಕ್ಕೆ ಮಾತ್ರ ಸೀಮಿತವಾಯಿತು. ಹಾಗೆ ಒಂದು ದಿನ ನಾನು ಸ್ಟಾಪ್ ಗೆ ಬಂದಾಗ ಮಾಮೂಲಿನಂತೆ ನನ್ನ ನೋಟ ಎದರು ಮರದ ಬಳಿ ಹೋಯ್ತು, ಆದರೆ ಅಂದು ಅವನಿರಲಿಲ್ಲ, ಒಂದು ಕ್ಷಣ ನನ್ನೆದೆ ಬಡಿತ ನಿಂತುಹೋಯ್ತು, ಆತನಿಗಾಗಿ ಮನ, ಮರದ ಸುತ್ತಮುತ್ತ ಕಣ್ಣಾಡಿಸುತ್ತಾ ಇದ್ದವು, ಆತ ಕಾಣದಿದ್ದಕ್ಕೆ ಮನದಲ್ಲಿ ಏನೋ ತಳಮಳ. ನಿಂತಲ್ಲೇ ನನ್ನ ಕಣ್ಣುಗಳು ಸುತ್ತಲೂ ಹುಡುಕಾಡತೊಡಗಿದವು. ಆತ ಮಾತ್ರ ಎಲ್ಲ್ಲೂ ಕಾಣಿಸಲಿಲ್ಲ. ಮನಸ್ಸು ಮುದುಡಿಹೋಯ್ತು. ಕಣ್ಣಲ್ಲಿ ನೀರು ತುಂಬಿತು. ಮನದಲ್ಲಿ ಏನು ಕಳೆದುಕೊಂಡ ಭಾವ, ಏನು ಮಾಡಬೇಕೆಂದೇ ತಿಳಿಯಲಿಲ್ಲ. ಅಷ್ಟಕ್ಕೂ ಅವನು ಯಾರೋ ಏನೋ ಅವನು ಬರದಿದ್ದರೆ ನನ್ನ ಮನಸ್ಸಿಗೆ ಏನಾಗಬೇಕು ಎಂಬುದು ಮನಸ್ಸಿನ ಒಂದು ಭಾವವೇರ್ಪಟ್ಟರೂ, ಮತ್ತೊಂದು ಕಡೆ ಏನೋ ಒಂದು ರೀತಿಯ ಹೇಳಲಾಗದ ಚಡಪಡಿಕೆ ನಿಲ್ಲಲೇ ಇಲ್ಲ ೧೦ ನಿಮಿಷ. ಹಾಗೆಯೆ ಪರಿವೇ ಇಲ್ಲದೆ ನಿಂತಿರಬೇಕಾದರೆ, ಆತ ಅಚಾನಕ್ಕಾಗಿ ಮರದ ಮರೆಯಿಂದ ಪ್ರತ್ಯಕ್ಷವಾದ, ಆತನ ಮನದಲ್ಲಿ, ನೋಡದೆಯ ಹೇಗೆ ಕಾಡಿಸಬಲ್ಲೆ ನಿನ್ನ ಎಂಬ ಭಾವವಿತ್ತು!!?? ಆತನ ನೋಟದಲ್ಲಿ ತುಂಟ ನಗುವಿತ್ತು! ಆದರೆ ಅದೇ ಕೊನೆ ಎಂದೂ ನಿಶ್ಚಯವಾಗಿತ್ತೋ ಏನೋ ಆತ ಮತ್ತೆಂದೂ ಸಿಗದ ಹಾಗೆ ನನ್ನ ಬದುಕಲ್ಲಿ ಊಹಿಸಲಾಗದಂತೆ ವೇಗವಾಗಿ ಬದಲಾವಣೆಗಳು ನಡೆದವು. ದ್ವಿತೀಯ ಪಿಯುಸಿಯ ಫಲಿತಾಂಶ ಬರುವ ಮೊದಲೇ ನನ್ನ ಮದುವೆ ನಿಶ್ಚಯವಾಯಿತು.

ಆ ನಂತರ ಬೆಂಗಳೂರು ಬಿಡಬೇಕಾಯಿತು. ಮತ್ತೆಂದೂ ಆ ಬಸ್ ಸ್ಟಾಪ್ ಬಳಿಗೆ ಹೋಗಲಾಗಲೇ ಇಲ್ಲ. ಅವನ ನೆನಪು ಕಾಡುತ್ತಿದ್ದರು ಯಾರಿಗೂ ಹೇಳಲಾಗದೇ ಮನದ ಮೂಲೆಯಲ್ಲಿ ಹಾಸಿಗೆ ಹಾಸಿ ಮಲಗಿಬಿಟ್ಟಿದ್ದವು. ಕೊನೆಗೂ ನನಗೆ ಅದು ಪ್ರೀತಿಯೋ, ಪ್ರೇಮವೋ ತಿಳಿಯಲೇ ಇಲ್ಲ. ಬರಿ ನೋಟಗಳ ವಿನಿಮಯಕ್ಕೆ ಮಾತ್ರ ಸಿಮೀತವಾಗಿ ಮುಗಿದಿತ್ತು ನಮ್ಮ ಭೇಟಿ. ಆದರೂ ಆತನನ್ನು ಬಿಟ್ಟಿರಲಾರೆ ಎಂಬ ಭಾವ ಯಾವತ್ತು ಕಾಡಲಿಲ್ಲ. ನೆನಪು ಮಾತ್ರ ಗಾಢವಾಗಿತ್ತು, ಮುಂದೆ ಮದುವೆ, ಮಕ್ಕಳು ಎಂದು ಸಂಸಾರ ಜಂಜಾಟದಲ್ಲಿ ಮುಳುಗಿದರೂ ಆಗಾಗ ಅ ಘಟನೆ ನೆನಪಾಗಿ ತುಟಿಯಲ್ಲಿ ನಗು ತೇಲುತ್ತದೆ. ಒಂದು ಮಧುರಭಾವ ಹಾಗೆ ಉಳಿದಿದೆ, ಆದರೆ ಅವನ ಮೊಗ ಮಸುಕಾಗಿದೆ ಅಷ್ಟೆ, ನನೆಪುಗಳು ಮಾತ್ರ ಹಚ್ಚಹಸಿರಾಗಿವೆ. ಈಗ ಅವನಿಗೂ ಮದುವೆ ಮಕ್ಕಳು ಆಗಿರಬಹುದೇನೋ? ನನ್ನಂತೆ ಅವನಿಗೂ ನನ್ನ ನೆನಪಿಂದ ನಗು ಬರುತ್ತಿರಬಹುದೇನೋ? ಎಂದು ಆಗಾಗ ಅನಿಸುವುದುಂಟು.ಅದು ನನ್ನ ಅನಿಸಿಕೆ ಮಾತ್ರ, ಆತನಲ್ಲಿ ಏನಿತ್ತೋ ಏನೋ ಒಂದು ಗೊತ್ತಿಲ್ಲ ಆತನಿಗೆ ನೋಟವಲ್ಲದೆ i love u ಎಂದು ಒಬ್ಬರಿಗೊಬ್ಬರು ಹೇಳಿಕೊಂಡಿದ್ದಿದ್ದರೆ ಈಗ ಜೀವನ ಹೇಗಿರುತ್ತಿತ್ತೋ ತಿಳಿಯದು, ಆದರೆ ಹಾಗೆ ಹೇಳದಿರುವುದೇ ಒಳ್ಳೆಯದಾಯಿತೆಂದು ಈಗ ಅನಿಸುತ್ತಿದೆ ನನಗೆ ಒಂದು ಮಧುರಭಾವ ಹಾಗೆ ಉಳಿದಿದೆ. ನೆನಪುಗಳು ಆಗಾಗ ಮನದ ಮೂಲೆಯಿಂದ ಬಂದು ಕಾಡುವುದಿದೆಯಲ್ಲಾ ಅದರಲ್ಲಿರುವ ಮಧುರವಾದ  ಭಾವ ಇಲ್ಲವಾಗಿರುತ್ತಿತ್ತೇನೋ.
ಕರೆಗಂಟೆಯ ಸದ್ದು ಯಾರೋ ಬಂದರೆಂದು ಕೂಗಿ ಹೇಳಿದಾಗ ನೆನಪಿಂದ ಹೊರಬಂದೆ..ಈಗ ಬರೆಯಬೇಕೆನಿಸಿತು ಬರೆದಿದ್ದೇನೆ ..ಓದಿ ನಿಮಗೆನನಿಸುತ್ತಿದೆಯೋ ನನಗೆ ತಿಳಿಯದು...ನನಗೆ ನಿರಾಳವೆನಿಸಿದೆ...
sunita hegde

{ರಾಧೆಯ ಸ್ವಗತ}




ಬಣ್ಣ ಬಣ್ಣದ ಭಾವನೆಗಳ ಓಕುಳಿಯ ನನ್ನ ಮೇಲೆ ಎರಚಿ
ಮನಸ್ಸು ಮೈಯನ್ನೆಲ್ಲ ಬಣ್ಣಗಳಲ್ಲಿ ತೆಲಾಡಿಸಿ
ಈಗ ಹೊದೆಯೇಲ್ಲಿಗೆ?

ನಿ ಇಲ್ಲದೆ ಬಾಳ ಬಣ್ಣವೇ ಬರಿದಾದಂತಿದೆ
ಬಣ್ಣ ಬಣ್ಣದ ಕನಸುಗಳು ಕಣ್ಣೊಳಗೆ ಬತ್ತಿ ಹೋಗಿದೆ...
ಎಲ್ಲವೂ ನಿನ್ನಲ್ಲಿ ಮಿಳಿತವಾಗಿ ಹೋಯಿತೇ?
ನೀನೆಲ್ಲವನು ಕೊಂಡೊಯ್ದೆಯಾ ?

ಮತ್ತೆ ಬಂದಿದೆ ಬಣ್ಣಗಳ ಹಬ್ಬ
ಬಣ್ಣಗಳು ಹಾಗೆಯೆ ಇವೆಯಲ್ಲ?
ಆದರೆ ನನ್ನ ಮನಸಿನ ಬಿಳಿ ಚಿತ್ತಾರಗಳಿಗೆ
ಬಣ್ಣ ತುಂಬುವ ಕನಸ್ಸು ಮಾತ್ರ
ಇಂದು ಮಾಯವಾಗಿದೆಯಲ್ಲ...!!??
.........suni

ನೆನಪು

ನನ್ನೆದೆಯ ಅಂಗಳದೆ ಆಡುವ ನಿನ್ನ ನೆನಪಿನ ಚೆಂಡು 
ಎದೆಯ ಗೋಡೆಗೆ ಬಡಿ ಬಡಿದು 
ತಡೆಯಲಾಗದ ನೋವ ತರುತಿಹುದು 
ಆ ನೋವೆ ನಿಟ್ಟುಸಿರಾಗಿ ಹೊರ ಹೊಮ್ಮಿ 
ನೂರಾರು ಭಾವನೆಗಳು ಆ ನಿಟ್ಟುಸಿರಿನೊಂದಿಗೆ ಚಿಮ್ಮಿ
ಗಾಳಿಯಲಿ ಬೆರೆತು ಹೋದವು ಗೆಳೆಯಾ .....
ಭಾವನೆಗಳ ಭಾರ ತಾಳಲಾಗದೆ ಆ ಗಾಳಿ
ನಿನ್ನೆಡೆಗೆ ಬಂದು ಮಳೆ ಸುರಿಸಿದರೆ
ಮಳೆಯ ಒಂದು ಹನಿಯ ನಿನ್ನ ಅಂಗೈ ಯಲ್ಲಿ ಹಿಡಿದು
ಕುಡಿದುಬಿಡು ಗೆಳೆಯಾ .....
ನಾನೇ ನೀನಾದ ಭಾವ ನಿನ್ನ ಸೇರುವುದು ನೋಡು
ಆಗ ಸಾರ್ಥಕವಾಗುವುದು ನನ್ನ ಬದುಕು
-------ಸುನಿತಹೆಗ್ದೆ

ಬಾಡಿದ ಮೊಗದೆ ನಿಂತ ಸೂರ್ಯಕಾಂತಿಗೆ
ಹುಣ್ಣಿಮೆಯ ಚಂದ್ರ ಕೇಳಿದ " ಏನಾಯ್ತೆ ನಿನ್ನ ಮೊಗದ ಕಾಂತಿ?"
ಮೊಗವೆತ್ತದೆ " ರವಿ ಕೊಂಡು ಹೋದ ನನ್ನೆಲ್ಲಾ ಶಾಂತಿ...ಇನ್ನೆಲ್ಲಿ ಇದ್ದಿತು ಮುಖದ ಕಾಂತಿ  "
ಎಂದಳು ಸೂರ್ಯ ಕಾಂತಿ ,,
,, ,ಸುನಿ

ಹೇಳಲೇ ಆಗದು ಮನದ ಭಾವನೆ
ಯಾಕೆ ಇಂತ ವೇದನೆ ಹೇಳೆಯೇನೆ
ಕೋಪದ ತಾಪದಲಿ ದಿನ ಕಳೆದು ಹೋಗಿದೆ 
ಕೂಡಲು ಏನುಂಟು ಕಳೆದ ಮತ್ತೆ ?
ಬರುವ ಉತ್ತರವೆಲ್ಲ ಬರಿ ಶೂನ್ಯ.
ಮೌನ ಹೃದಯ ಬಿರಿಯದಿರಲಿ ಗೆಳತಿ.
ಶೂನ್ಯಕ್ಕು ಅರ್ಥವಿದೆ ಯೆಂದೆನಿಸದೇನೆ ?
ಶೂನ್ಯದಿಂದಲ್ಲವೇ ಸೃಷ್ಟಿ
ಪ್ರೀತಿಪ್ರೇಮಗಳ ವೃಸ್ಟಿ
ಅಲ್ಲಿಂದಲೇ ಪಯಣ ಮನಸಿನರಮನೆಗೆ
ಮಾತಾಡುವ ಗಳಿಗೆ ಬರಬಹುದು
ನಿನ್ನ ಮೌನ ಮುರಿಯುವಲ್ಲಿಗೆ ಕಾದಿಹುದು ಮನ
ಅಂತ ಸುಂದರ ಸಮಯವನ್ನ 
..........ಸುನಿ

ಪ್ರೀತಿ 
ಮೊದಲನೇ ಸಲ ನಿನ್ನ ನೋಡಿದಾಕ್ಷಣ 
ಮನಸೆಲ್ಲ ತಲ್ಲಣ.ನನ್ನಲ್ಲಿ ನಾನಿಲ್ಲ ಎನಿಸಿತ್ತು ತಕ್ಷಣ.
ನೀನೆ ನಾನಾದ ಆ ಕ್ಷಣ
ಭಾವನೆಗಳಿಂದ ತುಂಬಿ ಹೋಗಿತ್ತು ನನ್ನ ಮನ
ಪ್ರೀತಿ ಎಂದರೆ ಇದೇನಾ ?
......... suni

ಕವನ



ಮಾನಸ ಗರ್ಭದಿಂದ 
ಮಾತಿಗೆ ನಿಲುಕದ ಭಾವನೆಗಳೆಲ್ಲ
ಖಾಲಿ ಹಾಳೆಯಮೇಲೆ ಲೇಖನಿಯಿಂದ
ಅಕ್ಷರಗಳಾಗಿ ಪ್ರಸವಿಸುವುದೇ ಕವನ
........ suni

ಮಿಡಿತ




ನನ್ನ ಹೃದಯದಲ್ಲಿರುವ ನೀನೆ

ಪ್ರೀತಿ ಮಿಡಿತವ ನಿಲ್ಲಿಸಿದರೆ

ಉಸಿರಾಡಲಿ ಹೇಗೆ ಗೆಳೆಯ?

ನಿನಗೂ ಕಟ್ಟದೆ ಉಸಿರು?
ಮುಚ್ಚಿಟ್ಟ ಪ್ರೀತಿಯ ಬಿಚ್ಚಿಡುವ ದಿನವಿಂದು
ಬೆಚ್ಚಗೆ ಕಾಪಿಟ್ಟ ಹೊಚ್ಹ ಹೊಸ ಭಾವನೆಯದು
ಹೇಳುವ ಗಳಿಗೆಗೆ ಎದಿರು ನೋಡಿದ ಮನಸದು
ಹೇಳಿಬಿಡು ಆ ಹೃದಯಕೆ ಮಾತಾಗಲಿ ಮನದ ಬಯಕೆ
............................................ ....................... suni

ಪ್ರೀತಿಯ ನಂಟು


February 14 

ಬಾನು ಭೂಮಿ
ಸೇರದು ಎಂದು
ಆದರು ಅದೆಂತಾ
ಪ್ರೀತಿಯ ನಂಟು
ಏನಿದರ ಗುಟ್ಟು?

ಬಾನು ಸುರಿಸುವ ಮಳೆ ಹನಿಗೆ
ಮೈ ದೆರೆದು ನಲಿವ ಇಳೆ
ಬಿದ್ದ ಮೊದಲ ಹನಿಗೆ ಹಿತವಾಗಿ
ತನ್ನೊಡಲ ಕಂಪ ಸೂಸುವಳು

ಹಸಿರುಡುಗೆ ಉಟ್ಟು
ಹೂವ ಆಭರಣ ತೊಟ್ಟು
ನಲಿದಾದುವಳು
ಪ್ರೀತಿಯ ವರ್ಷ ಧಾರೆ ಹರಿಸಿದ ಬಾನು
ತೃಪ್ತಿಯಿಂದ ನೀಲಮೆಘನಾಗಿ ಹಿಗ್ಗುವನು
ಇಳೆಯ ಸೌಂದರ್ಯ ಕಂಡು............suni
ನೀನಿತ್ತ ಮೊದಲ ಮುತ್ತಿಗೆ ಸೋತ ಇ ಮನ
ಸೋತೆ ಹೋಗಿದೆ ಮತ್ತೆಂದೂ ಸಿಗದ ನಿನ್ನ ಪ್ರೀತಿಗೆ ಕಾಯುತ್ತ 
....ಸುನಿ

ವಸಂತ ಗಾನ



ನೋಡಲ್ಲಿ ವಸಂತನಾಗಮನ 
ಮಾಮರದಿ ಕೋಗಿಲೆಯ ಋತುಗಾನ 
ಗಿಡಮರಗಳಲಿ ಹೂವಿನ ತೋರಣ 
ಅದರೆಡೆಗೆ ದುಂಬಿಗಳ ಚಾರಣ
ಭೂ ರಮೆಗೆ ವಸಂತನ ಶೃಂಗಾರ
ಹಸಿರ ಸೀರೆಯುಟ್ಟ ಅವಳ ವೈಯಾರ
ಕಂಡ ಬಾನು ಪ್ರೀತಿಯ ಮಳೆ ಸುರಿಸಿದ ಧಾರಾಕಾರ

ಪತಿತ ಪಾವನೆಯರು

ಮುನಿದರಲ್ಲಿ ಗಂಗೆ ಯಮುನೆಯರು
ತಾಳ್ಮೆಯ ಕಟ್ಟೆಯೊಡೆದು ಹೊರಟ ನೀರೆಯರು 
ಸಿಕ್ಕಿದ್ದನ್ನೆಲ್ಲಾ ಕೊಚ್ಚಿ ಕೊಂಡೊಯ್ಯುತಿಹರು
ಸಿಟ್ಟಿನಲೆಯ ಸುನಾಮಿಯಾಗಿಹರು 
ಪಾಪ ಕಳೆವ ತನ್ನೊಡಲನ್ನೇ ಮಲೀನ ಮಾಡುತಿಹ ಮನುಜನ 
ಹೀನ ಗುಣಗಳ ನೆನೆದು ಬೋರ್ಗರೆದು ಅಳುತಿಹರು
ಮುಯ್ಯಿ ತೀರಿಸ ಹೊರಟಿಹರು
ತಮ್ಮನ್ನು ತಾವೇ ಶುದ್ದಿಕರಿಸಿ ಕೊಳ್ಳಲು
ರುದ್ರನನ್ನೇ ದಿಕ್ಕರಿಸಿ ಹೊರಟ
ದೇವಲೋಕದ ಪತಿತ ಪಾವನೆಯರು
ಸುನಿ

ಭಾವ


ನಿನ್ನ ಸನಿಹದ ಒಡನಾಟದಲಿ
ನನ್ನ ಮನದಾಳದಲಿ
ಏನೇ ಅನಿಸಿದರು
ನಿನ್ನ ಬಗೆಗೆ ಮೂಡುವ ಸಿಹಿ ಭಾವ
ಹಾಗೆಯೇ ಉಳಿದುಬಿಡಲಿ
ನಿನ್ನೆಡೆಗೆ ಉಕ್ಕುವ
ಭಾವದಲೆಗಳ ಮೇಲೆ
ನಾ ನಿತ್ಯ ತೇಲುವ
ಮೋಡವಾಗಿ ಇದ್ದುಬಿಡುವೆ
ಓ ಗೆಳೆಯ
suni

ಮುರಳಿ ಮೋಹನ ಗಾನ

ಮುರಳಿ ಮೋಹನ ಗಾನ
ಕುಣಿದಿದೆ ನೋಡು ನನ್ನ ಮನ ।। ಮುರಳಿ ।।

ನಿನ್ನಧರದ ಸ್ಪರ್ಶಕೆ ಬೀಗುವ ಕೊಳಲು
ಹರಿವುದು ನೋಡು ಗಾನದ ಹೊನಲು
ಕೊಳಲಿನ ಭಾಗ್ಯಕೆ ಕರುಬುವುದು ಮನ
ಹೇಗೆ ಹೇಳಲಯ್ಯ ಮನದ ಆಸೆಯ ನಾ.... ।।ಮುರಳಿ।।

ಕೊಳಲ ಗಾನದಲಿ ಮನದಮಾತಿದೆ
ನಿನ್ನೊಲವ ಕಥೆಯೆಲ್ಲಾ ಕೊಳಲೇ ಹೇಳಿದೆ
ಒಲವ ಸುಧೆಯಲಿ ಮೀಯೋಣ ಬಾ
ಪ್ರಕೃತಿ ಪುರುಷ ನಾವಾಗೋಣ ಬಾರಾ...।। ಮುರಳಿ ।।
..................suni

ಅವನಿಲ್ಲದ ಹೊತ್ತು .....................


ಅವನಿಲ್ಲದ
ಹೊತ್ತು 
ಮೌನ 
ಅಲೆದಾಡುತಿತ್ತು......
ಗಾಳಿ ಅವನ
ಹೆಸರ ಹೇಳುತಿತ್ತು...
ಬೆಳಕು ಹೊಳಪ
ಕಳೆದು ಕೊಂಡಿತ್ತು....
ಶೂನ್ಯ ಆ ಹೊತ್ತಿಗೆ
ಅಧಿಪತಿಯಾಗಿತ್ತು.....
ಅವನಿಲ್ಲದ ಹೊತ್ತು
ನನ್ನ ಪ್ರಪಂಚ ಕಳೆದು ಹೋಗಿತ್ತು ......!!!!!!!! .
.................................. suni
ಹಳೆಯ ನೆನಪುಗಳೆಲ್ಲ ಸಾಲಾಗಿ
ಕಣ್ಣಲ್ಲಿ ತೆಲತೊಡಗಿದೆ ಹನಿಯಾಗಿ
ಹರಿಯಬಿದಲೇ ಕಂಬನಿಯಾಗಿ?

suni

ಐ ಲವ್ ಯು



ಒಂದು ಕ್ಷಣ ತಬ್ಬಿಬ್ಬಾದಳು ಆ ಮೆಸ್ಸೇಜನ್ನು ಓದಿ .. . ಮತ್ತೊಮ್ಮೆ ಮಗದೊಮ್ಮೆ ಓದಿ ಮೆಸ್ಸೇಜನ್ನು ಕಳಿಸಿದವರ ಹೆಸರು ನೋಡಿ ಮತ್ತೂ ದಿಗ್ಭ್ರಮೆಗೊಂದಳು ಗೋಮತಿ ..
ಇದು ಕನಸೋ ನಿಜವೋ ಅರ್ಥ ಆಗಲಿಲ್ಲ . ಮೊಬೈಲನ್ನು ತಿರುಗಿಸಿ ಮುರುಗಿಸಿ ನೋಡಿದಳು .ಇದು ನನ್ನದೇ ಮೊಬೈಲ ಎಂದು . ತನ್ನ ಕೈಯನ್ನೊಮ್ಮೆ ಚಿವುಟಿಕೊಂಡು ಅಯ್ಯಮ್ಮ ಎಂದು ಸಣ್ಣಗೆ ಚೀರಿದಳು . ಯಾರಿಗೋ ಕಳಿಸಬೇಕಾದ ಮೆಸ್ಸೇಜನ್ನು ನನಗೆ ಕಳಿಸಿದರ?.ಅಥವ ಏನಾದರೂ ಪರೀಕ್ಷೆ ಮಾಡುವುದಕ್ಕಾಗಿಯ..ಏನು ತಿಳಿಯಲಿಲ್ಲ.. ಎದೆಯಲ್ಲಿ ಸಣ್ಣಗೆ ಕಂಪನ .. ತಲೆ ತಿರುಗಿದ ಹಾಗೆಲ್ಲ ಆಗಲು ಶುರುವಾಯ್ತು .. ಅಸ್ಟಕ್ಕೆಲ್ಲ ಕಾರಣ ಏನು ಅಂತಿರ? ಗಂಡನಿಂದ ಒಂದೇ ಒಂದು ಮೆಸ್ಸೇಜು ಬಂದದ್ದು. ಅರೆ ಇದ್ರಲ್ಲಿ ಅಸ್ಟೆಲ್ಲಾ ಅವಸ್ತೆ ಪಡೋಕೆ ಏನಿದೆ?ಎಲ್ಲರೂ ಮಾಡ್ತಾರಪ್ಪ ಅಂತ ಕೇಳ್ತಿರ?ಆದರೆ ಗಂಡ ಮೊಬೈಲು ತೆಗೆದುಕೊಂಡ ಮೇಲೆ ಬಂದ ಮೊದಲ ಮೆಸ್ಸೇಜು ಅವಳ ಫೋನಿಗೆ .೧೦ ವರ್ಷಗಳೇ ಕಳೆದಿದೆ ಮೊಬೈಲು ತೆಗೆದುಕೊಂಡು . ಈಗ ಅದು ಇಂಥ ಮೆಸ್ಸೇಜು ಬಂದರೆ ? .... ಮದುವೆಯಾಗಿ ೨೬ ವಸಂತಗಳನ್ನು ಕಳೆದ ಮೇಲೆ ಬಾಯಿಯಲ್ಲಿ ಹೇಳದಂತದ್ದನ್ನ ಮೆಸ್ಸೇಜಲ್ಲಿ ಕಳಿಸಿದಾರೆ ಅಂದ್ರೆ ಹೀಗೆಲ್ಲಾ ಆಗದಿರತ್ತ ನೀವೇ ಹೇಳಿ? ಏನ್ರೀ ಅಂತದ್ದು ಬಾಯಲ್ಲಿ ಹೇಳದೆ ಇರೋ ಅಂತಾ ಮೆಸ್ಸೇಜು ಅಂತಿರಾ ಅಯ್ಯೋ ಇರಿ ಕೋಪ ಮಾಡ್ಕೋಬೇಡಿ ... ..
"I LOVE U " ಅಂತರೀ .. ಅರ್ಥ ಆಯ್ತಾ ನಿಮಗೆ ? ಈಗ ಹೇಳಿ ಇದು ತಲೆ ಕೆಡೋ ವಿಷಯ ಅಲ್ವ?. ಕಳೆದ ೨೬ ವರ್ಷದಲ್ಲಿ ಒಂದೇ ಒಂದು ಸಲ ನನ್ನ ಎದುರಿಗೆ ನನಗಾಗಿ ಹೇಳದ್ದನ್ನು ಈಗ ಮೆಸ್ಸೇಜು ಮಾಡಿ ಹೇಳುವನ್ತಾದ್ದು ಏನಿರಬಹುದೆಂಬ ಕೀಟ ಅವಳ ತಲೆ ಕೊರೆಯಲಾರಂಬಿಸಿತು .ತಕ್ಷಣ ಫೋನಿಸಿದಳು ಪತಿದೇವರಿಗೆ
" ಹಲೋ ರೀ ....
"ಹಲೋ ಹೇಳು ...
"ಈಗ ತಾನೇ ಒಂದು ಮೆಸ್ಸೇಜೂ .....
"ಹೌದು ಫೋನು ಇಡು ಆಮೇಲೆ ಬಂದು ಮಾತಾಡ್ತೀನಿ ......
ಲೈನು ಕಟ್ ಆಯಿತು . ಆದರು ಇರಲಿ ಎಂದು ತಾನು ಒಂದು " ಐ ಲವ್ ಯು" ಟೈಪಿಸಿ ಕಳಿಸಿ ಬಿಟ್ಟಳು
ಸರಿ ಶುರುವಾಯ್ತು ಅನುಮಾನಗಳ ಸರಮಾಲೆ. ಹೀಗೆ ಇರಬಹುದಾ ಹಾಗೆ ಇರಬಹುದಾ ಎಂದೆಲ್ಲ ಊಹಿಸಿ ಅದಕ್ಕೆ ಏನು ಪರಿಹಾರ ಹೊಳೆಯದೆ ಸುಸ್ತಾದಳು
ಒಮ್ಮೆ ನನ್ನ ಮದುವೆಯಾದಂದಿನಿಂದ ಇಲ್ಲಿಯವರೆಗೂ ನಡೆದದ್ದನೆಲ್ಲಾ ಮೆಲುಕು ಹಾಕಿದಳು .ಉಹು ಯಾವತ್ತು ಇ ಶಬ್ದ ಅವರ ಬಾಯಿಂದ ಬಂದದ್ದೆ ಇಲ್ಲ .ಎಲ್ಲಾದರು ಹೋದಾಗ ಅಕಸ್ಮಾತಾಗಿ ಗಂಡಂದಿರು ಅವರ ಹೆಂಡತಿಗೆ ಹೀಗೆ ಹೇಳಿದ್ದನ್ನ.... ಸಿನೆಮಾಗಳಲ್ಲಿ ,,, ಪಾರ್ಟಿ ಗಳಲ್ಲಿ ಹೆಂಗೆಳೆಯರು ಉಲಿಯುವುದನ್ನು ಕಂಡಿದ್ದ ಅವಳಿಗೆ . ನನ್ನ ಗಂಡನ ಬಾಯಲ್ಲಿ ಕೇಳಬೇಕು ಎಂಬ ಆಸೆ ಏನೋ ತುಂಬಾ ಇತ್ತು .. ಆದರೆ ಹಾಗೆ ಹೇಳಿ ಎಂದು ಕೇಳಲಾಗುತ್ತದೆಯೇ ? ...ಆದ್ರೆ ಈಗ ದಿಡೀರ್ ಅಂತ ಮೆಸ್ಸೇಜಿನಲ್ಲಿ?
ಹೌದು" ಐ ಲವ್ ಯು" ಅನ್ನೋ ಮೂರ್ ಪದಗಳ ಮ್ಯಾಜಿಕ್ಕೆ ಹಾಗೆ .ನಾವು ಪ್ರೀತಿ ಮಾಡಿದವರಿಂದ ...ಕೇಳೋದಕ್ಕೆ ಕಾತರಿಸುತ್ತಲೇ ಇರುತ್ತದೆ ಕಿವಿಗಳು .ಎದೆಬಡಿತ ಒಂದೇ ಸಲಕ್ಕೆ ಯೇರೆಬಿಡುತ್ತದೆ. ಹದಿಹರೆಯದವರಿಗಂತೂ ಇದೊಂದು ಮಂತ್ರವಾಗಿದೆ ಅಂದ್ರೆ ತಪ್ಪೇನಿಲ್ಲ ... ಆದ್ರೆ ಈಗೀಗ ಇಂಟರ್ನೆಟ್ ಮೊಬೈಲುಗಳು ಅಂತ ಏನೇನೊ ಹೊಸ ಹೊಸದೆಲ್ಲ ಶುರುವಾಗಿ ಎಲ್ಲರೂ ಎಲ್ಲರಿಗೂ ಆ ಪದಗಳ ಬಳಕೆ ಮಾಡುವುದಕ್ಕೆ ಶುರುವಾಗಿದೆ ಇದರ ಬೆಲೆಯೂ ಕಡಿಮೆ ಅಗಿದೆಯೆನ್ನಿ... ಮಾತನಾಡೋಹಾಗಿಲ್ಲ ಐ ಲವ್ ಯು ಅಂದೇ ಬಿಡ್ತಾರೆ ಪರಮಾತ್ಮ.... ... ಹೀಗೆ ಯೋಚನೆಗಳ ಸುಳಿಯಲ್ಲಿ ಮುಳುಗಿಯೇ ಹೋದಳು .
ಸರಿ ಬಂದಮೇಲೆ ಕೇಳಿದ್ರಾಯ್ತು ಅಂತ ಅಂದ್ಕೊಂಡ್ರೆ ಮನಸ್ಸು ಚದಪದಿಸುತ್ತಲೇ ಕನಸುಗಳ ಕೋಟೆಗೆ ಲಗ್ಗೆ ಇಟ್ಟೇ ಬಿಡ್ತು .ಬಹುಶ: ನನ್ನ ನೆನಪಾಗಿ ತುಂಬಾ ಪ್ರೀತಿ ಉಕ್ಕಿಬಂದಿರಬೇಕು ..... ಅಥವಾ ಅಲ್ಲಿ ಯಾರೋ ಅವರ ಹೆಂಡತಿನ ಹೊಗಳಿ ನಾನು ನನ್ ಹೆಂಡ್ತಿನ ತುಂಬಾ ಪ್ರೀತಿ ಮಾಡ್ತೀನಿ ಅಂದಾಗ ನನ್ನ ಬಗ್ಗೆ ಇವರಿಗೆ ಕಾಳಜಿ ಯಾಗಿ ಹೇಳಿರಬಹುದು...... ಹೀಗೆ ಏನೇನೊ ಕಾರಣಗಳನ್ನ ಮನಸ್ಸು ಹುಡುಕಿ ಹುಡುಕಿ ಕೆದಕತೊದಗಿತು. ಒಂದು ಕಡೆ ಖುಷಿಯಲ್ಲಿ ತೇಲಾಡಿ ಹೋಗುತ್ತಿದ್ದ ಮನಸ್ಸು. ಇನ್ನೊಂದು ಕಡೆ ಅನುಮಾನಗಳ ಹುತ್ತವಾಗಿ ದಿಕ್ಕು ತಪ್ಪುತ್ತಿದೆ.ಹೇಗಪ್ಪಾ ಇ ಮನಸ್ಸನ್ನ ಹತೋಟಿಗೆ ತರೋದು ಅಂತ ಒದ್ದಾಡುತಿದ್ದವಳಿಗೆ ಅವರ ಕಾರಿನ ಶಬ್ದ ಕಿವಿಗೆ ಬಿತ್ತು . ಬಂದಕೂಡಲೇ ಅವರ ಬ್ಯಾಗ್ ತೆಗೆದುಕೊಂದಳು ಶೂ ಬಿಚ್ಚುವುದರೊಳಗೆ ಕಾಫಿ ಬಂದಾಯಿತು ಅವರೀಗೊ ಆಶ್ಚರ್ಯ ... ಎನಿವತ್ತು ಫಾಸ್ಟ್ ಸರ್ವಿಸ್ ಅಂತ ಕೆಳೆಬಿಟ್ರು ..ಯೆನಿಲಪ್ಪ ಎಂದು ಸುಮ್ಮನೆ ಕಿರು ನಗೆ ನಕ್ಕು ವಾರೆ ನೋಟ ಬೀರುತ್ತ .ಎನಾದರು ಹೇಳಬಹುದೇನೋ ಎಂದು ಕಾತರದಿಂದ. .ಕಾಫಿ ಮುಗಿದರು ಏನು ಸುದ್ದಿ ಇಲ್ಲ...ತಡೆಯಲಾಗದೆ ಕೇಳಿ ಬಿಟ್ಟಳು "ಏನಿವತ್ತು ಅಸ್ಟೊಂದು ಪ್ರೀತಿ ಉಕ್ಕಿಬಂದಿತ್ತಾ ನನ್ ಮೇಲೆ " ಅವರೀಗೆ ಏನೊಂದು ಅರ್ಥವಾಗಲಿಲ್ಲ ".ಯಾಕೆ?" ಅಂದರು "ಅದೇ ಮೆಸ್ಸೆಜೂ "ಅಂದಳು . ಅವರು ಜೋರಾಗಿ ನಕ್ಕುಬಿಟ್ಟರು ಇವಳಿಗೆ ನಸು ಕೋಪ "ಯಾಕೆ ನಗು? "ಯಾವತ್ತು ಇಲ್ಲದ್ದು ಇವತ್ತೇನು" ಅಂದಳು ." ಇಲ್ಲ ಕಣೆ ನಮ್ಮ ಮೀಟಿಂಗ್ ನಲ್ಲಿ ಇವತ್ತು ಕಸ್ಟಮರ್ ಗಳನ್ನ ಹೇಗೆ ಸಂಪರ್ಕದಲ್ಲಿ ಇಟ್ಕೊಬೇಕು ಅನ್ನೋ ವಿಷಯದ ಮೇಲೆ ಮಾತಾಡಿದ್ರು ..... ಅದ್ರಲ್ಲಿ ಹೀಗೆ ಸುಮ್ನೆ ನಿಮ್ಮ ಮನೆಯವರಿಗೆ ನೀವು ಯಾವಗದ್ರು ಮೆಸ್ಸೇಜು ಮಾಡ್ತಿದ್ರ?ಏನಾದ್ರು ಕಳ್ಸಿ ಅವರ ರಿಯಾಕ್ಟ್ ಹೇಗಿರತ್ತೆ ನೋಡಿ ಅಂದ್ರು ಅದಕ್ಕೆ ಹಾಗೆ ಕಲಿಸ್ದೆ...ನನೊಬ್ನೆ ಅಲ್ಲ ಎಲ್ರು ಅವ್ರ ಅವ್ರ ಹೆಂಡತಿಯರಿಗೆ ಕಳ್ಸಿದ್ರು ಕಣೆ" ಅನ್ನೋದೇ ಆತ ?
ಒಂದು ಕ್ಷಣ ಅದಕ್ಕೂ ನಿಮ್ಮ ಐ ಲವ್ ಯು ಗು ಏನ್ರೀ ಸಂಬಂದ ?" ... ..
"ನಾನು ನಿಂಗೆ ಯಾವತ್ತು ಮಸ್ಸೇಜು ಮಾಡದೆ ಇವತ್ತು ಕಲ್ಸಿದ್ದಕ್ಕೆ ನಿನ್ನ ರಿಯಕ್ಷನ್ನು ಹೇಗಿತ್ತು ಹೇಳು? ನಾನು ಸದಾ ಮೆಸ್ಸೇಜು ಮಾಡಿದಿದ್ರೆ ನಿಂಗೆ ಆಶ್ಚರ್ಯ ಆಗ್ತಾ ಇರ್ಲಿಲ್ಲ ಅಲ್ವ?ಹಾಗೆ ಗ್ರಾಹಕರೊಂದಿಗೂ ಕೂಡ ಸದಾ ಸಂಪರ್ಕ ದಲಿ ಇರ್ಬೇಕು ಇಲ್ಲಾಂದ್ರೆ ಅವರಿಗೆ ವಿಶ್ವಾಸ ಇರೋಲ್ಲ ಅಂತ ಅನ್ನೋದಕ್ಕೆ ಇದೊಂದು ಉದಾಹರಣೆ ಅಸ್ಟೇ " ಅನ್ನೋದೇ. ಅಲ್ಲಿಗೆ ಅವಳ ಕಲ್ಪನೆಯ ಕೋಟೆ ಕುಸಿದುಬಿತ್ತು " "ಹಾಗಿದ್ರೆ ನೀವು ಪ್ರೀತಿ ಇಂದ ಕಳ್ಸಿದ್ದು ಅಲ್ವ ಅದು" ಅಂತ ಕೇಳಿದ ಅವಳ ಸಪ್ಪೆ ಮೊರೆ ನೋಡಿ ಯೆನನಿಸ್ತೋ " ಅಯ್ಯೋ ಪ್ರೀತಿ ಇಂದಾನೆ ಕಳ್ಸಿದ್ದು ಮಹರಾಯ್ತಿ " ಅಂತ ಹೇಳಿದ್ರು ... ಆದರು ಸಮಾಧಾನ ಆಗ್ಲಿಲ್ಲ
"" ಅವ್ರೆ ಹೇಳಿದ್ರ ಐ ಲವ್ ಯು ಅಂತ ಕಳ್ಸಿ"" ಅಂತ
""ಇಲ್ಲ ಕಣೆ ಅದನ್ನು ನಾನೆ ಕಲ್ಸಿದ್ದು... "" .. ಅಲ್ಲಿಗೂ ನಾನು ಸುಮ್ಮನಿರದೆ
""ರೀ ಒಂದೇ ಒಂದು ಸಲ ಅದನ್ನೇ ಬಾಯಲ್ಲಿ ಹೇಳ್ರಿ "" ಅಂತ ಕೇಳಿಯೇಬಿಟ್ಟಳು .. ಅದಕ್ಕವರು ""ಬಾಯಲ್ಲಿ ಹೇಳಿದರೆ ಮಾತ್ರ ಪ್ರೀತಿ ಅಂತ ಅರ್ಥಾನ? ಅದು ಹೃದಯದಲ್ಲಿ ಇರಬೇಕೆ ಹೊರತು ತೋರಿಕೆಯಾಗಿರಬಾರದು ನಂಗೆ ಆ ಬೂಟಾಟಿಕೆಯೆಲ್ಲ ಗೊತ್ತಿಲ್ಲ... ಕಾರ್ಯದಲ್ಲಿ ಮಾತ್ರ ತೋರಿಸಬಲ್ಲೆ ಅಸ್ಟೇ "".ಎಂದು ಬರಸೆಳೆದು ತಬ್ಬಬೇಕೆ?...... ನಿಜ ಅದೆಸ್ತು ಅರ್ಥವತ್ತಾಗಿದೆ ಮಾತುಗಳು . ಐ ಲವ್ ಯು ಅಂದಮಾತ್ರಕ್ಕೆ ಪ್ರೀತಿ ಇದೆ ಅನ್ನೋದು ಸುಳ್ಳು .ಅದೆಸ್ಟೇ ತೊಂದರೆಗಲಿರಲಿ ನಾನು ಬೇಸರಿಸಬಾರ್ದೆಂದು ನನಗೆ ಹೇಳದೆ ತನ್ನೊಳಗೆ ಇಟ್ಟುಕೊಂಡು ಹೊರಗಡೆ ನಗುತ್ತ ಇರುತ್ತಾರೆ. ನನ್ನ ಬಿಟ್ಟು ಒಂದು ಕ್ಷಣವೂ ಇರುವುದಿಲ್ಲ. ನಾನು ನಗುತ್ತಾ ಇರಬೇಕೆಂದು ಸದಾ ಬಯಸುವ ಅವರ ಇಂಥ ಪ್ರೀತಿಯ ಮುಂದೆ ಬೇರೆಲ್ಲ ಯಾವ ಲೆಕ್ಕ ? ... ಇದಕ್ಕಿಂತ ಬಾಯಲ್ಲಿ ಬರಿ ಐ ಲವ್ ಯು ಹೇಳಿಕೊಂಡು ಬೆನ್ನಲ್ಲಿ ಚೂರಿ ಹಾಕುವ ಸ್ವಭಾವ ವನ್ನು ಯಾಕೆ ಬಯಸ ಬೇಕು ಅಲ್ಲವೆ..? ಎಂದು ಅನಿಸಿ ತೃಪ್ತಿಯಿಂದ ಮುದ್ದಿಸಿದಳು ಗೋಮತಿ ತನ್ನ ಪತಿಯನ್ನು . ಆದರು ಮನದ ಮೂಲೆಯಲೆಲ್ಲೋ ಒಂದೇ ಒಂದು ಬಾರಿ ಆ ಮೂರು ಪದಗಳನ್ನ ನನ್ನ ಗಂಡನ ಬಾಯಿಂದ ಎಂದಾದ್ರೂಹೇಳಿಸಲೇ ಬೇಕೆಂಬ ಮಹದಾಸೆ ಹೆಡೆಯೆತ್ತಿ ನಿಂತಿತ್ತು

sunita hegde

Saturday, June 8, 2013

ಪಳಿಯುಳಿಕೆ



ಕೊಲ್ಲದಿರಿ ನೆನಪುಗಳೇ ಅವನ ರಾಯಭಾರಿಯಾಗಿ
ಅವನೆಲ್ಲೋ ನಾನೆಲ್ಲೋ
ನೀವೇಕೆ ಸುಡುವಿರಿ ನನ್ನ
ಅವನಿತ್ತ ಪ್ರೀತಿಯ ಪಳಿಯುಳಿಕೆಗಳಾಗಿ ?
......suni
ಯಾಕೆ ಮೂಕವಾಗಿದೆ ನಿನ್ನ ಮುರಳಿ 
ಬರಲಿ ಗಾನ ಸುಧೆ ಅದರಲರಳಿ ....
ಮೌನವಾಗಿದೆ ಮನ 
ಹೊತ್ತು ಹೋಗದು ಕೃಷ್ಣ 
ಬೇಗ ನುಡಿಸೋ ನಿನ್ನ ಕೊಳಲನ ಆ.... ಆ... ।।ಯಾಕೆ ।।

ನಿನ್ನ ವೇಣು ನಾದ ಕೇಳೆ
ನೋಡು ಕಾದಿಹಳು ಇಳೆ
ಪಶು ಪಕ್ಷಿಗಳು ಕಾತರಿಸಿಹವು
ಕೇಳೆ ನಿನ್ನ ಗಾನ ಸುಧೆ ।। ಯಾಕೆ ।।

ನಿನ್ನ ಅಧರ ಸೋಕೇ ಕೊಳಲು
ಮದುರನಾದ ಉಲಿವುದು
ಶಾರದೆಯೇ ಬರುವಳಿಲ್ಲಿ
ಗಾನಾಮೃತ ಕೇಳಲು ।।ಯಾಕೆ।।

ನೋಡು ನಿನ್ನ ಮುತ್ತಿಹವು
ಅಂಬಾ ಎನ್ನುತ ಗೋವುಗಳು
ನಿನ ಮೋಹನ ಮುರಳಿ ದನಿಗೆ
ಜಗವೇ ಮರುಳು ಮರಳು ।।ಯಾಕೆ।।
.....ಸುನಿ

ಓದುಗ

ಕಣ್ಣು ನೇಯುವ ಕನಸುಗಳಿಗೆ ಭಾವನೆ ಜೊತೆಯಾಗಿದೆ
ಅಂತರಂಗದ ಬಯಕೆಗಳಿಗೆ ಮನಸೇ ವೇದಿಕೆಯಾಗಿದೆ
ಅದರಿಂದ ಬಂದ ಮಾತುಗಳು ಪದಗಳಲಿ ಮೂಡಿ ನಿಂತಿದೆ
ಅದರ ಓದುಗ ನೀನಾಗಬೇಕೆಂದು ಬಯಸುವೆ

ಆತ್ಮ ಬಂಧು

ಅವ ನನ್ನ ಜೀವ ಬಿಂದು
 ನನ್ನೆದೆಯ ಭಾವಬಿಂದು
 ದೂರವಿದ್ದಾಗ ಸೆಳೆವ ಸೂಜಿ ಗಲ್ಲಂತೆ
ಸನಿಹ ಬರೆ ಸುಳಿವ ಮಿಂಚಂತೆ
 ಜೀವ ಭಾವದಲಿ ಬೆರೆತ
ಆತ್ಮ ಬಂಧುವೀತ