Wednesday, December 19, 2012

ನಿಟ್ಟುಸಿರು



ನಟ್ಟಿರುಳಲಿ ಎದೆಯೊಳಗೆ   ಸುಳಿದಾಡುವ  ನಿಟ್ಟುಸಿರಿಗೆ
ಏನೆಂದು ಹೆಸರಿಡಲಿ? ಬೇಸರವೆಂದೆ? 
ಮತ್ತೇಳು ಸುತ್ತಿನ ಮಲ್ಲಿಗೆ  ಅರಳುವ ಸಮಯ ತಂದ 
ನಿನ್ನ ನೆನಪಿನ ಘಮ ಎಂದೇ?
ಆ ನೆನಪು ತಂದ ವಿರಹವೆಂದೆ?
ಏನೆಂದು ಹೆಸರಿಡಲಿ ಗೆಳೆಯ?
 ಏನಾದರೇನು ? ಆ ನಿಟ್ಟುಸಿರು ನಿನ್ನ ನೆನಪಿನ ಬಸಿರು
ಪ್ರಸವದ ಬಯಕೆ ಅದಕಿಲ್ಲ 
ನಿಟ್ಟುಸಿರ ಗರ್ಭದಲಿ  ಹುದುಗಿರಲಿ
 ಮಿಸುಕಾಡಲಿ ಸದಾ ನಿನ್ನ ಹೆಸರು.
 ಬೇಡ ಆ  ಉಸಿರಿಗೊಂದು ಹೆಸರು 

No comments:

Post a Comment