ನೆನಪು
ನನ್ನೆದೆಯ ಅಂಗಳದೆ ಆಡುವ ನಿನ್ನ ನೆನಪಿನ ಚೆಂಡು
ಎದೆಯ ಗೋಡೆಗೆ ಬಡಿ ಬಡಿದು
ತಡೆಯಲಾಗದ ನೋವ ತರುತಿಹುದು
ಆ ನೋವೆ ನಿಟ್ಟುಸಿರಾಗಿ ಹೊರ ಹೊಮ್ಮಿ
ನೂರಾರು ಭಾವನೆಗಳು ಆ ನಿಟ್ಟುಸಿರಿನೊಂದಿಗೆ ಹೊರ ಚಿಮ್ಮಿ
ಗಾಳಿಯಲಿ ಬೆರೆತು ಹೋದವು ಗೆಳೆಯಾ .....
ಭಾವನೆಗಳ ಭಾರ ತಾಳಲಾಗದೆ ಆ ಗಾಳಿ
ನಿನ್ನೆಡೆಗೆ ಬಂದು ಮಳೆ ಸುರಿಸಿದರೆ
ಮಳೆಯ ಒಂದು ಹನಿಯ ನಿನ್ನ ಅಂಗೈ ಯಲ್ಲಿ ಹಿಡಿದು
ಕುಡಿದುಬಿಡು ಗೆಳೆಯಾ .....
ನಾನೇ ನೀನಾದ ಭಾವ ನಿನ್ನ ಸೇರುವುದು ನೋಡು
ಆಗ ಸಾರ್ಥಕವಾಗುವುದು ನನ್ನ ಬದುಕು
No comments:
Post a Comment