Sunday, July 31, 2011

ಪ್ರೀತಿ

ಪ್ರೀತಿ  ಒಂದು ಸುಂದರ ಸರೋವರ
ಅದರಲ್ಲಿ ಈಜಾಡುವ ಬಣ್ಣ  ಬಣ್ಣದ
 ಮೀನುಗಳನ್ನು ಕಂಡಾಗ  ಮನಸು ಹೇಳಿತು
'' ಒಹ್ ಎಸ್ಟೊಂದು ಸುಂದರ ''
ಅರಿವಿಲ್ಲದೆ ಅದರಲ್ಲಿ ಈಜ ಹೊರಟ ನನಗೆ
ತಿಳಿದಿರಲಿಲ್ಲ  ಮುಳುಗಿದರೆ ಸಿಗದು ಆಧಾರ .


Friday, July 22, 2011

ಸಮಾಧಿ

            
ನೆಲೆ ಇಲ್ಲದ....ಬೆಲೆಯೂ ಸಿಗದ...ಕೆಲವು ಭಾವನೆಗಳು
ಮನಸಲಿ ಹುಟ್ಟುವುದೆತಕ್ಕೋ?
ಒರಟು ಮಾತಿನಡಿ ನಲುಗಿ ಸಾಯುವುದೆತಕ್ಕೋ?
ಮನದ ಗರ್ಭದಲೇ ಅದಕೆ ಹುಟ್ಟು
ಅದೇ ಮನಸೇ ಭಾವನೆಗಳ ಹೂತಿಟ್ಟ ಸಮಾಧಿ
ನಲುಗಿದ ನೋವಿಗೆ ಮಿಡಿಯುವ ಕಂಬನಿಯೇ ಅದಕೆ
 ಅಶ್ರು ತರ್ಪಣ
ಎಂತಹ ವಿಪರ್ಯಾಸ ಅಲ್ಲವೇ?