Wednesday, October 28, 2020

ಬಾ ಬೆಳಗು ಜ್ಯೋತಿ

-ಬಾ ಬೆಳಗು

ಬಾ ಬೆಳಗು ನನ್ನೊಳಗೆ 
ಅರಿವ ಕಣ್ಣ ತೆರೆವ ಜ್ಯೋತಿ
ನೂರು ದಾರಿಗಳಿಗೆ ನನ್ನ ನಾ
ತೆರೆದುಕೊಳ್ಳುವ ಮುನ್ನ

ಕಾಣದ ಬಲೆಯೊಳಗೆ ನಾನೇ 
ನಾನಾಗಿ ಸಿಲುಕುವಾ ಮೊದಲು
ಬಾ ಬೆಳಗು ನನ್ನೊಳಗೆ ಬೆಳಕೇ

ಕಾಣದಾ ಅಲೆಗಳು ನನ್ನ
ಮುತ್ತುವ ಭಯವಿದೆ 
ಮಂಜಾದ ಹೊರಗಣ್ಣು
ಒಳಗಣ್ಣಿನಾ ಆಣತಿ ಬಯಸಿದೆ

ನನ್ನೊಳಗ ನಾ ಅರಿಯೆ 
ನಿನ್ನಾಸರೆ ಬೇಕಾಗಿದೆ
ಓ ಜ್ನಾನ ಜ್ಯೋತಿ

ಬಾ ಬೆಳಗು ಅಂತರಾತ್ಮವ
ತಮವಳಿಯಲಿ ಹೃದಯದಲಿ
ಅರಿವಿನಾ ಕಣ್ಣು ತೆರೆಯಲಿ....,.✒- ಸುನೀ

Wednesday, September 23, 2020

ಕಾಲ ಕಾಯುವುದಿಲ್ಲ ಯಾರಿಗೂ
ನೀನೆ ಓಡಬೇಕು ಅದರೊಂದಿಗೆ
ಮುಗಿಸಬೇಕು ನಾಳೆಯ ಕೆಲಸ
ಇಂದೇ ಈಗಲೇ ಎನುವಂತೆ
ಕಾಯಬೇಡ  ಖುಷಿಯ
ಘಳಿಗೆಗಳಿಗಾಗಿ ಕಾಯಿಸಲೂ
ಬೇಡ  ನಿರೀಕ್ಷೆಗೆಡೆಮಾಡಿ..
ಚಿಕ್ಕದು ಹುಟ್ಟು ಸಾವಿನ
ನಡುವಿನ ಜೀವನ
ಹೇಳಲಾಗದು ಸಾವಧಾನ
ಅದು ಹೀಗೇ ನಡೆಯುತ್ತಿರುತ್ತದೆ
ಬದುಕಿನೊಡನೆ ನಮ್ಮ ಸಂಧಾನ..... ಸುನೀ❤️

Sunday, September 6, 2020

ಕೃಷ್ಣನಾಗುವುದೆಂದರೆ  
ಹೆಂಗೆಳೆಯರ ಸುತ್ತ
ಸುತ್ತುವುದಲ್ಲ
ಸ್ನೇಹದ ನೆಪದಲಿ ಅವರ
ಮನಸಿನೊಡನಾಡುವುದಲ್ಲ 
ಪ್ರೀತಿಯ ಹೆಸರಿನಲ್ಲಿ  ನಗ್ನ
ಮಾಡುವುದಲ್ಲ
ಗೋಪಿಕೆಯರಿದ್ದರೂ ರಾಧೆಗಾಗೇ
ಪ್ರೀತಿಯ ಮೀಸಲಿಟ್ಟವನ
ಸಾವಿರ ಸಾವಿರ ಹೆಂಡಂದಿರ
ಮಧ್ಯೆಯೂ ಬ್ರಹ್ಮಚರ್ಯೆ
ಕೈಗೊಂಡವನ
ಸ್ನೇಹದಲ್ಲೂ ಪ್ರೀತಿಯ
ಪಾಲಿಸಿದವನ
ಭಕ್ತಿ ಪ್ರೀತಿ ನಿಷ್ಠೆಗಷ್ಟೇ
ಒಲಿವ ಕೃಷ್ಣನಾಗುವುದು
ಸುಲಭವಿಲ್ಲ.... ಸುನೀ

Tuesday, August 25, 2020

ಸ್ನೇಹ ಪ್ರೀತಿಯನ್ನು ಅದನ್ನು ನಿಭಾಯಿಸಲಾಗದವರು ಮಾಡಲೇ ಬಾರದು.. ಗಳಿಸಿಕೊಳುವುದೂ ಸುಲಭವಲ್ಲ ಹಾಗೇ ಉಳಿಸಿಕೊಳ್ಳುವುದೂ.. ಯಾವುದನ್ನು ನಾವು ಹೃದಯಪೂರ್ವಕವಾಗಿ ಮಾಡಲಾಗುವುದಿಲ್ಲವೋ ಅದನ್ನು ಉಳಿಸಿಕೊಳ್ಳುವುದು ಕಷ್ಟ.. ಒಂದೇ ಕಾಲಕ್ಕೆ ಸಾವಿರ ಸ್ನೇಹ ಮಾಡಬಹುದು. ಪ್ರೀತಿ ಕೂಡ ಮಾಡಬಹುದು. ಅದು ನಮ್ಮಿಚ್ಛೆ.. ಆದ್ರೇ ನಿಭಾಯಿಸಬೇಕಾದ್ದು ನಮ್ಮ ಕರ್ತವ್ಯ. ಇಚ್ಛೆಗೂ ಕರ್ತವ್ಯಕ್ಕೂ ವ್ಯತ್ಯಾಸವಿದೆ. ಎಲ್ಲರಿಗೂ ಪ್ರೀತಿ ಸ್ನೇಹ ನೀಡುವ ಮನಸ್ಸಿದ್ದರೇ ಅಲ್ಲಿ ಸ್ವಾರ್ಥ ಸುಳಿಯಬಾರದು. ಸ್ವಾರ್ಥವಿಲ್ಲದ ಮುಚ್ಚು ಮರೆಯಿಲ್ಲದ ಮನಸಿಗಷ್ಟೇ ಸ್ನೇಹ ಪ್ರೀತಿ ದಕ್ಕುವುದು. ಸ್ನೇಹಕ್ಕೆ ಅರ್ಥ ಕೃಷ್ಣ ಮತ್ತು ದ್ರೌಪದಿ.. ಕೃಷ್ಣ ಮತ್ತು ಸುಧಾಮ.‌ಕರ್ಣ ಮತ್ತು ದುರ್ಯೋಧನ . ಗಳಿಸುಕೊಳ್ಳುವುದರಲ್ಲಿರೋ ಗುಣ ಉಳಿಸಿಕೊಳ್ಳೊದರಲ್ಲಿರಬೇಕು.. ಕಾರಣವಿಲ್ಲದೇ ಸ್ನೇಹವನ್ನು ಪ್ರೀತಿಯನ್ನು ದೂರ ಮಾಡುವ ವ್ಯಕ್ತಿತ್ವ  ಇರುವ ಮನ್ಸುಗಳಿಗೆಂದೂ ಸರಿಯಾದ ಸ್ನೇಹ ಅಥವಾ ಪ್ರೀತಿ ದೊರಕದು.. ಎಷ್ಟು ಜನವಿದ್ದರೂ ಅವರುಗಳು ಒಂಟಿತನವನ್ನೇ ಅನುಭವಿಸುತ್ತಾರೆ. ನಿಷ್ಠೆ ಇಲ್ಲದಲ್ಲಿ ಪ್ರೀತಿ ಉಳಿಯುವುದಿಲ್ಲ. ಸ್ವಾರ್ಥವಿದ್ದಲ್ಲಿ ಸ್ನೇಹ ಬಾಳುವುದಿಲ್ಲ..... ಸುನೀ

Monday, July 27, 2020

ಎಷ್ಟು ಕಾಲ ಕಾದರೇನೂ 
ಬಾರನವನು ಎಂದಿಗೂ
ಭಾವಗಳಿಗೆ ನಿಲುಕುವವನು
ಬಾಳಿಗಾಗನೆಂದಿಗೂ
ಅದು ಭಕ್ತಿಯೋ ಪ್ರೀತಿಯೋ  
ಅರಿಯೆನಾನಿಂದಿಗೂ..
ಶ್ಯಾಮನೆಂಬ ಬೆಳಕು ನನ್ನೊಳಗ 
ಬೆಳಗುತಿರಲು ಅವನಿರವು
ಶಾಶ್ವತವೆಂದೆಂದಿಗೂ......ಸುನೀ


Saturday, July 4, 2020

ವಾಸ್ತವ

ಭಾವನೆಗಳು ಗಡಿ
ಮೀರಿದಾಗಲೇ
ವಾಸ್ತವತೆಯ
ಅರಿವಾಗುವುದು..

Friday, January 24, 2020

ಸ್ವಾಮಿ ಶ್ರೀಧರಾ

ಗುರುವಾರದ ಪ್ರಯುಕ್ತ ನಮ್ಮ ಶ್ರೀಧರ ಸ್ವಾಮಿ ಗಳ ಮೇಲೊಂದು ಹಾಡು ಬರೆಯುವ ಸಣ್ಣ ಪ್ರಯತ್ನ...

      ಗುರುಭ್ಯೋ   ನಮಃ..

ಸ್ವಾಮಿ ಶೀಧರಾ ಸ್ವಾಮಿ ಶ್ರೀದರಾ..
ವರದ ಪುರದ ಮಹಾಶಕ್ಟಿ ಸ್ವಾಮಿ  ಶ್ರೀಧರಾ
ನಿತ್ಯ ನಿನ್ನಯಾ ನೋಡಲು ಬರುವಾ
ಭಕ್ತರಿಗೆ ಕೃಪೆಯ  ತೋರಿ ಅಭಯ ನೀಡೆಯಾ. (ಸ್ವಾಮಿ)

         ಹಸಿರು ಕಾನನದ ನಡುವೆ ನಿನ್ನ ಸನ್ನಿಧಿ
         ಬಂದ ಭಕ್ತ ಜನರಿಗೇ  ನೀ  ಪುಣ್ಯದಾ ನಿಧಿ
        ನಿನ್ನ ಕರುಣೆ. ಕಂಡ ಮನಕೆ ಎಲ್ಲಾ ಸೋಜಿಗ
        ನಿನ್ನ ಆಶಿರ್ವಾದದಲ್ಲಿ ಮಿಂದಿದೆ ಜಗ. (ಸ್ವಾಮಿ)

ಗುರುವೆ ನಿನ್ನ ಪಾದದಡಿಯ ಧೂಳು ನಾನು
ನನ್ನ ಪೊರೆವ ಮಹಾಮಹಿಮ ಯತಿಯು ನೀನು
ಧರ್ಮಧ್ವಜವ ನಿಲಿಸಿದಂತ ಪುರುಷೋತ್ತಮ
ನಿನ್ನ ದಯದಿ ಕಳೆವುದಿಲ್ಲಿ ಕಷ್ಟದಾ ತಮ (ಸ್ವಾಮಿ).... ಸುನೀ